ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಪ್ಪುಹಣ: ಕೇಂದ್ರ ನೀಡಿದ ಪಟ್ಟಿಯಲ್ಲಿಲ್ಲ ಯಾವುದೇ ದೊಡ್ಡ ಹೆಸರು?

ಕಪ್ಪುಹಣದ ವಿರುದ್ಧ ದೇಶದಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ದೊಡ್ಡ ಮಟ್ಟದ ಯಶಸ್ಸು ದೊರೆಯುವ ಸಾಧ್ಯತೆ ಕಡಿಮೆ.

Lingaraj Badiger
Updated On : 30 Oct 2014, 12:23 pm

ನವದೆಹಲಿ: ಕಪ್ಪುಹಣದ ವಿರುದ್ಧ ದೇಶದಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ದೊಡ್ಡ ಮಟ್ಟದ ಯಶಸ್ಸು ದೊರೆಯುವ ಸಾಧ್ಯತೆ ಕಡಿಮೆ. ಏಕೆಂದರೆ ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ 627 ಕಪ್ಪು ಹಣದ ಖಾತೆದಾರರ ಪೈಕಿ ಯಾವುದೇ ದೊಡ್ಡ ಉದ್ಯಮಿ ಅಥವಾ ಪ್ರಮುಖ ರಾಜಕಾರಣಿಯ ಹೆಸರು ಇಲ್ಲ ಎಂದು ಗುರುವಾರ ಮೂಲಗಳು ತಿಳಿಸಿವೆ.

ಮೂಲಗಳನ್ನೇ ನಂಬುವುದಾದರೆ, ಭಾರತಕ್ಕೆ ಬರುವ ಕಪ್ಪು ಹಣದ ಮೊತ್ತ ಬಹಳ ಕಡಿಮೆ. ಸುಮಾರು 350 ಮಂದಿ ಮಾತ್ರ ತೆರಿಗೆ ವಂಚಿಸಿ, ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಆದರೆ ಇವರ ಖಾತೆಯಲ್ಲಿರುವುದು ಕೇವಲ 40ರಿಂದ 50 ಕೋಟಿ ಕಪ್ಪು ಹಣ ಮಾತ್ರ. ಹೀಗಾಗಿ ಭಾರಿ ಮೊತ್ತದ ಕಪ್ಪುಹಣ ಭಾರತಕ್ಕೆ ಬರುತ್ತದೆ ಎಂಬ ನಿರೀಕ್ಷೆ ಸುಳ್ಳು. ಇನ್ನುಳಿದಂತೆ ಪಟ್ಟಿಯಲ್ಲಿ ಅನಿವಾಸಿ ಭಾರತೀಯರಿದ್ದು, ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ಬರುವುದಿಲ್ಲ ಎನ್ನಲಾಗಿದೆ.

ಈ ಮಧ್ಯೆ ಕಪ್ಪು ಹಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಾರ್ವಜನಿಕರಿಂದ ಮಾಹಿತಿ ಕೋರಿದ್ದು, ಕಪ್ಪಹಣದ ಬಗ್ಗೆ ಮಾಹಿತಿ ಇದ್ದರೆ ಇ-ಮೇಲ್ ಮೂಲಕ ತಿಳಿಸುವಂತೆ ಮನವಿ ಮಾಡಿದೆ.

ಕಪ್ಪುಹಣದ ಬಗ್ಗೆ ಸಾರ್ವಜನಿಕರು ಸಹ ಮಾಹಿತಿ ನೀಡಬಹುದು. ಅವರು ನೀಡಿದ ಮಾಹಿತಿ ಕುರಿತು ನಾವು ತನಿಖೆ ನಡೆಸುತ್ತೇವೆ. ಆದರೆ ನಾವು ಖಚಿತ ಮಾಹಿತಿ ಬಯಸುತ್ತೇವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement