ಲೈಂಗಿಕ ಕಿರುಕುಳ ಪ್ರಕರಣ: ರಾಘವೇಶ್ವರ ಶ್ರೀಗಳಿಗೆ ನೋಟಿಸ್
ಕಲಾವಿದೆ ಪ್ರೇಮಲತಾ ಅವರಿಗೆ ಲೈಂಗಿಕ...
ಬೆಂಗಳೂರು: ಕಲಾವಿದೆ ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಗಿರಿನಗರ ಪೊಲೀಸರು ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ.
ಗಿರಿನಗರ ಎಎಸ್‌ಪಿ ಪಿ.ಸುರೇಶ್ ಅವರು ಖುದ್ದು ಹೊನ್ನಾವರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ತೆರಳಿ, ಪ್ರಕರಣ ಸಂಬಂಧ ಇದುವರೆಗೂ ವಿಚಾರಣೆಗೆ ಹಾಜರಾಗದ ಶ್ರೀಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸೆಪ್ಟೆಂಬರ್ 10ರೊಳಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ರಾಘವೇಶ್ವರ ಶ್ರೀಗಳಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಈ ಮಧ್ಯೆ, ನೋಟಿಸ್ ನೀಡಲು ಬಂದಿದ್ದ ಪೊಲೀಸರಿಗೆ ಮಠದ ಕಾರ್ಯಕರ್ತರು ಹಾಗೂ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಠದ ಬಳಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಶ್ರೀಗಳು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಬೆದರಿಕೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಗಾಯಕಿ ಪ್ರೇಮಲತಾ ದಿವಾಕರ್ ಪರವಾಗಿ ಪುತ್ರಿ ಅಂಶುಮತಿ ಶಾಸ್ತ್ರಿ ಪ್ರತಿದೂರು ದಾಖಲಿಸಿದ್ದರು.