ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಶ್ಮೀರ ಪ್ರವಾಹ: ಒಂದೇ ಕುಟುಂಬದ 9 ಕನ್ನಡಿಗರ ರಕ್ಷಣೆ

ಕಾಶ್ಮೀರದ ಭೀಕರ ಪ್ರವಹಾಕ್ಕೆ ಸಿಲುಕಿದ್ದ ಬೆಂಗಳೂರಿನ ಚಿಕ್ಕಲಸಂದ್ರದ ನೀವಾಸಿಗಳಾದ ಒಂದೇ ಕುಟುಂಬದ...

Mainashree
Updated On : 10 Sept 2014, 2:43 am

ಶ್ರೀನಗರ: ಕಾಶ್ಮೀರದ ಭೀಕರ ಪ್ರವಹಾಕ್ಕೆ ಸಿಲುಕಿದ್ದ ಬೆಂಗಳೂರಿನ ಚಿಕ್ಕಲಸಂದ್ರದ ನೀವಾಸಿಗಳಾದ ಒಂದೇ ಕುಟುಂಬದ 9 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 5ರಂದು ಸಂಕಷ್ಟಕ್ಕೆ ಸಿಲುಕಿದ್ದ 9 ಕನ್ನಡಿಗರನ್ನು ಬೋಟ್ ಮೂಲಕ ರಕ್ಷಿಸಲಾಗಿದ್ದು, ಶ್ರೀನಗರದ ಗುರುದ್ವಾರದಲ್ಲಿ ಆಶ್ರಯ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಚಿಕ್ಕಲಸಂದ್ರದ ಕೃಷ್ಣಮೂರ್ತಿ, ಗಂಗಾಧರ್, ವತ್ಸಲಾ, ಶ್ರೀಹರ್ಷ, ಪೂರ್ಣಿಮಾ, ಮಂಜುನಾಥ್, ಭಾರತಿ, ಸೀತಾಲಕ್ಷಿ, ಶಷಾಂಕ್‌ನನ್ನು ರಕ್ಷಣೆ ಮಾಡಲಾಗಿದೆ.

ಇಂದೇ ವಿಮಾನದ ಮೂಲಕ ಕರ್ನಾಟಕ ರಾಜ್ಯಕ್ಕೆ ಈ ಕುಟುಂಬ ಆಗಮಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರಿ ಪ್ರವಾಹದಲ್ಲಿ ಇನ್ನೂ 300ಕ್ಕೂ ಹೆಚ್ಚು ಜನರು ಸಿಲುಕಿದ್ದು, ಸಂತ್ರಸ್ತರನ್ನು ಸಂಪರ್ಕಿಸಲು ಅಧಿಕಾರಿಗಳು ಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಐಎಎಸ್ ಅಧಿಕಾರಿ ರಮಣ್ ದೀಪ್ ಚೌಧರಿ ನೇತೃತ್ವದ ಅಧಿಕಾರಿಗಳು ಶ್ರೀನಗರದಲ್ಲಿರುವ ಕನ್ನಡಿಗರ ರಕ್ಷಣೆಗಾಗಿ ತೆರಳಿದ್ದಾರೆ. ಜೀಲಂ ನದಿ ಪ್ರವಾಹ ಐದು ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement