ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೂಡ ಬನ್ನಿ ಇಲ್ಲಿ

Vishwanath S
Updated On : 12 Sept 2014, 9:18 am

ಬೆಂಗಳೂರು: ಹೊಸ ಕೈಗಾರಿಕಾ ನೀತಿಗೆ ಒಪ್ಪಿಗೆ, ನಿರ್ಗತಿಕರು, ಕುಷ್ಠರೋಗಿಗಳು ಸೇರಿದಂತೆ ಸೌಲಭ್ಯ ವಂಚಿತರಿಗೆ 10 ಸಾವಿರ ಮನೆ ನಿರ್ಮಾಣ, ಕೈದಿಗಳ ಅವಧಿಪೂರ್ವ ಬಿಡುಗಡೆ ವಿಚಾರದಲ್ಲಿ ರಾಜ್ಯಪಾಲರ ಅಧಿಕಾರಕ್ಕೆ ಮೊಟಕು ಮಾಡುವ ರೀತಿ ಮಾರ್ಗದರ್ಶಿ ಸೂತ್ರಕ್ಕೆ ತಿದ್ದುಪಡಿ ಮಾಡುವುದೂ ಸೇರಿದಂತೆ ಮಹತ್ವದ ವಿಚಾರಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆದಿದ್ದು, ಕಾನೂನು ಇಲಾಖೆ ಸಲಹೆ ಪಡೆಯಲು ನಿರ್ಧರಿಸಲಾಗಿದೆ.

ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಈ ವಿಷಯ ತಿಳಿಸಿದ್ದು, ಸಭೆಯ ಪ್ರಮುಖ ನಿರ್ಧಾರಗಳು ಹೀಗಿವೆ.

ಹೊಸ ಕೈಗಾರಿಕಾ ನೀತಿ
2014ರಿಂದ 19ರವರೆಗೆ ಅನ್ವಯವಾಗುವಂತೆ ಹೊಸ ಕೈಗಾರಿಕಾ ನೀತಿ ಜಾರಿ. 5 ವರ್ಷದ ಅವಧಿಯಲ್ಲಿ ರು. 5ಲಕ್ಷ ಕೋಟಿ ಬಂಡವಾಳ ಆಕರ್ಷಿಸುವ ಗುರಿ. 15 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿ. ರಾಜ್ಯದ ಜಿಡಿಪಿಗೆ ಉತ್ಪಾದನಾ ಕ್ಷೇತ್ರದ ಕೊಡುಗೆಯನ್ನು ಶೇ. 20ರಷ್ಟು ಹೆಚ್ಚಿಸುವ ಮಹಾತ್ವಾಕಾಂಕ್ಷೆಯನ್ನು ಈ ನೀತಿ ಹೊಂದಿದೆ. ಇದರ ಜತೆಗೆ ಈಗ ಇದ್ದ ನಾಲ್ಕು ಕೈಗಾರಿಕೆ ಸ್ಥಾಪನೆಗೆ ಬಂಡವಾಳ ಹೂಡಿಕೆ ಮತ್ತು ಧನ ಸಹಾಯವನ್ನು ಶೇ. 50 ರಿಂದ  100ಕ್ಕೆ ಹೆಚ್ಚಳ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರಿಗೆ ಈ ವಿಚಾರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಲು ಹಾರೋಹಳ್ಳಿ ಮತ್ತು ಹುಬ್ಬಳ್ಳಿಯಲ್ಲಿ ಕೈಗಾರಿಕಾ ತರಬೇತಿ ಶಾಲೆ ಸ್ಥಾಪನೆ, 7ರಿಂದ 14 ವರ್ಷ ವ್ಯಾಟ್ ಮತ್ತು ಸ್ಥಿರಾಸ್ತಿ ತೆರಿಗೆ ವಿನಾಯಿತಿ, ವ್ಯಾಪಾರಿ ಪರವಾನಗಿ ವಿನಾಯಿತಿ, ಸರ್ಕಾರದ ವತಿಯಿಂದಲೇ ಕೈಗಾರಿಕಾ ವಸಾಹತು ಸ್ಥಾಪನೆ, ಕೆಟಿಪಿಪಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ವಿಚಾರಗಳು ಈ ನೀತಿಯಲ್ಲಿ ಅಡಕವಾಗಿವೆ.

* ಬಜೆಟ್‌ನಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದ 18 ಗಡಿ ಜಿಲ್ಲೆಗಳ 33 ತಾಲೂಕು ವ್ಯಾಪ್ತಿಯಲ್ಲಿ ಪಶುಗಳಿಗೆ ಬರುವ ಸೋಂಕು ರೋಗ ತಡೆಯಲು ಚೆಕ್‌ಪೋಸ್ಟ್ ಮತ್ತು ಪರಿವೀಕ್ಷಣಾ ಕೇಂದ್ರ ಸ್ಥಾಪಿಸಲು ಒಪ್ಪಿಗೆ. ಒಟ್ಟು 20.48 ಕೋಟಿ ವೆಚ್ಚದಲ್ಲಿ ಇಂಥ ಕೇಂದ್ರ ನಿರ್ಮಾಣ.

* ಗ್ರಾಮೀಣ ಪ್ರದೇಶದಲ್ಲಿ ರು. 10 ಲಕ್ಷದವರೆಗೆ ಉತ್ಪಾದನಾ ಸಾಮಥ್ಯ ಹೊಂದಿದ 1000 ಸೂಕ್ಷ್ಮ ಕೈಗಾರಿಕೆ ಸ್ಥಾಪಿಸಲು ಒಪ್ಪಿಗೆ.

* ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದ ಲೋಕಾಯುಕ್ತ ಸಂಸ್ಥೆಯ ವಾರ್ಷಿಕ ವರದಿಯನ್ನು ರಾಜ್ಯಪಾಲರ ಅನುಮತಿಗೆ ಕಳುಹಿಸಲು ಒಪ್ಪಿಗೆ. ಪ್ರತಿ ವರ್ಷ ವರದಿಯನ್ನು ಶಾಸನಸಭೆಯ ಗಮನಕ್ಕೆ ತಾರದ ಸಂಸ್ಥೆಯ ಕ್ರಮದ ಬಗ್ಗೆ ಸಚಿವರ ಆಕ್ರೋಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement