ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತಾಕತ್ ಇದ್ದರೆ ಮುಸ್ಲಿಂ ಸಂಘಟನೆ ಬ್ಯಾನ್ ಮಾಡಿ: ಶೋಭಾ

ಶೋಭಾ ಕೋಮುವಾದಿ ಪರ ಇದ್ದಂತಿದೆ: ಸಿದ್ದು

Vishwanath S
Updated On : 13 Sept 2014, 4:02 am

ಚಿಕ್ಕಮಗಳೂರು: ಪ್ರಮೋದ್ ಮುತಾಲಿಕ್ ನೇತೃತ್ವದ ಹಿಂದೂಪರ ಸಂಘಟನೆ ಶ್ರೀರಾಮ ಸೇನೆ ಸಂಘಟನೆಯ ನಿಷೇಧಕ್ಕೆ ಚಿಂತನೆ ನಡೆಸಿದಿದೆ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸವಾಲು ಹಾಕಿರುವ ಸಂಸದೆ ಶೋಭಾ ಕರಂದ್ಲಾಜೆ, ತಾಕತ್ ಇದ್ದರೆ ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದಿದ್ದಾರೆ.

ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಮುಖ್ಯಮಂತ್ರಿಗಳು ತಾಕತ್ ಇದ್ದರೆ ಮುಸ್ಲಿಂ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಸವಾಲು ಹಾಕಿದರು.

ಹಿಂದೂ ಪರ ಸಂಘಟನೆಗಳನ್ನು ಕಾನೂನಿನ ಮೂಲಕ ಮಟ್ಟ ಹಾಕಲು ಮುಖ್ಯಮಂತ್ರಿಗಳು ಯತ್ನಿಸುತ್ತಿದ್ದಾರೆ ಇದಕ್ಕೆ ನಾವು ಅವಕಾಶಕೊಡುವುದಿಲ್ಲ ಎಂದರು.

ಗೋವಾ ಸರ್ಕಾರ ಶ್ರೀರಾಮ ಸೇನೆ ಸಂಘಟನೆ ನಿಷೇಧ ಹೇರಿದೆ. ಅದೇ ರೀತಿ ರಾಜ್ಯದಲ್ಲೂ ಶ್ರೀರಾಮ ಸೇನೆ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಶೋಭಾ ಕರಂದ್ಲಾಜೆ ಕೋಮುವಾದಿ ಪರ ಇದ್ದಂತಿದೆ: ಸಿದ್ದು
ಬೆಂಗಳೂರು: ಹಿಂದೂ ಪರ ಸಂಘಟನೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಅವರು, ಮುಖ್ಯಮಂತ್ರಿಗಳಿಗೆ ತಾಕತ್ ಇದ್ದರೆ ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದು ಸವಾಲು ಹಾಕಿದ್ದರು ಇದಕ್ಕೆ ತಿರುಗೇಟು ಮುಖ್ಯಮಂತ್ರಿಗಳು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸಂಸದೆ ಶೋಭಾ ಕರಂದ್ಲಾಜೆ ಅವರು ಕೋಮುವಾದಿಗಳ ಪರ ಇರೋರ ಹಾಗೇ ಮಾತನಾಡುತ್ತಿದ್ದಾರೆ. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಯಾರೇ ದಾಂದಲೆ ನಡೆಸಿದರೇ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಂಥವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement