ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಂದು ಮುಂದುವರೆದ ಕಾರ್ತಿಕ್‌ಗೌಡ ವಿಚಾರಣೆ

ನಟಿ ಮೈತ್ರಿಯಾಗೌಡಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಆರ್.ಟಿ ನಗರ ಪೊಲೀಸರ ಎದುರು ಹಾಜರಾಗಿದ್ದ ಕೇಂದ್ರ ಸಚಿವ ರೇಲ್ವೆ ಸಚಿವ...

Vishwanath S
Updated On : 13 Sept 2014, 11:42 am

ಬೆಂಗಳೂರು: ನಟಿ ಮೈತ್ರಿಯಾಗೌಡಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಆರ್.ಟಿ ನಗರ ಪೊಲೀಸರ ಎದುರು ಹಾಜರಾಗಿದ್ದ ಕೇಂದ್ರ ಸಚಿವ ರೇಲ್ವೆ ಸಚಿವ ಸದಾನಂದಗೌಡ ಪುತ್ರ ಕಾರ್ತಿಕ್‌ಗೌಡರ ವಿಚಾರಣೆ ಇಂದು ಸಹ ಮುಂದುವರೆದಿದೆ.

ಪ್ರಕರಣಕ್ಕೆ ಸಂಬಂಧ ನಿನ್ನೆ ಬೆಳಗ್ಗೆ ಆರ್.ಟಿ ನಗರ ಪೊಲೀಸರ ಮುಂದೆ ಹಾಜರಾದ ಕಾರ್ತಿಕ್‌ಗೌಡರ ವಿಚಾರಣೆ ರಾತ್ರಿ ಎಂಟು ಗಂಟೆಯ ತನಕ ನಡೆದಿತ್ತು. ಇಂದು ಸಹ ಅವರ ವಿಚಾರಣೆ ತನಿಖಾಧಿಕಾರಿ ಎಸಿಪಿ ಓಂಕಾರಯ್ಯನವರ ನೇತೃತ್ವದಲ್ಲಿ ನಡೆಯುತ್ತಿದೆ.

ನಟಿ ಮೈತ್ರಿಯಾಗೌಡ ಅವರು ಕಾರ್ತಿಕ್‌ಗೌಡ ನನ್ನನ್ನು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಬಂಧವನ್ನು ಬೆಳೆಸಿದ್ದು, ಈ ಮತ್ತೊಂದು ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ನನಗೆ ವಂಚಿಸಿದ್ದಾನೆ ಎಂದು ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಮೈತ್ರಿಯಾಗೌಡ ದೂರು ನೀಡಿದ್ದರು. ಈ ದೂರಿನನ್ವಯ ಕಾರ್ತಿಕ್ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿದ್ದವು.

ನಿನ್ನೆ
ಕಾರ್ತಿಕ್ ನನ್ನು ಪೊಲೀಸರು ಗೌಪ್ಯವಾಗಿ ಮಡಿವಾಳದಲ್ಲಿರುವ ಕೆಎಸ್‌ಆರ್‌ಪಿ ಐಬಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಉತ್ತರ ವಿಭಾಗಾಧಿಕಾರಿ ಡಿಸಿಪಿ ಸುರೇಶ್ ಕುಮಾರ್ ಮತ್ತು ಡಿಸಿಪಿ ಓಂಕಾರಯ್ಯ ಅವರ ನೇತೃತ್ವದಲ್ಲಿ ಕಾರ್ತಿಕ್ ಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.ಸತತ 9 ಗಂಟೆಗಳ ಕಾಲ ಕಾರ್ತಿಕ್ ಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದ್ದು, ಈ ವೇಳೆ ಕಾರ್ತಿಕ್ ತಮಗೂ ಮೈತ್ರಿಯಾಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement