ನಿತ್ಯಾನಂದ ಪುರುಷತ್ವ ಪರೀಕ್ಷೆ: ಸಿಐಡಿಗೆ ಮಧ್ಯಂತರ ವರದಿ ಸಲ್ಲಿಕೆ
ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿರುವ..
ಬೆಂಗಳೂರು: ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿರುವ ನಿತ್ಯಾನಂದನ ಪುರುಷತ್ವ ಪರೀಕ್ಷೆಯ ಮಧ್ಯಂತರ ವರದಿಯನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮುಚ್ಚಿದ ಲಕೋಟೆಯಲ್ಲಿ ಸಿಐಡಿಗೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗೋಷ್ಠಿ ನಡೆಸಿದ ವೈದ್ಯರು. ನಿತ್ಯಾನಂದನಿಗೆ ಯಾವುದೇ ಅಶ್ಲೀಲ ದೃಶ್ಯ ತೋರಿಸಿಲ್ಲ, ಪರೀಕ್ಷೆ ವೇಳೆ ನಿತ್ಯಾನಂದಗೆ ಹಸ್ತ ಮೈಥುನ ಮಾಡಿಸಿಲ್ಲ, ಪ್ರಚೋದನೆಗೆ ಹುಡುಗಿಯರನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಐಡಿ ಪೊಲೀಸರಿಗೆ ಪರೀಕ್ಷೆಯ ವರದಿ ಸಲ್ಲಿಸಿದ್ದೇವೆ ಪರೀಕ್ಷೆ ಮಾಡಿದ ಎಲ್ಲಾ ವೈದ್ಯರು ಸಹಿ ಮಾಡಿದ್ದಾರೆ, ಮುಂದಿನ ಕ್ರಮ ತನಿಖಾಧಿಕಾರಿಗಳು ಕೈಗೊಳ್ಳುತ್ತಾರೆ, ಪರೀಕ್ಷೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ಎಲ್ಲಾ ವರದಿ ಸುಳ್ಳು ಎಂದು ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಣ್ಣ ಹೇಳಿದ್ದಾರೆ.