ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೈಸೂರಿನಲ್ಲಿ ದೇವಾಲಯದ ಮೇಲೆ ಉರುಳಿದ ಮರ: 2 ಸಾವು

Vishwanath S
Updated On : 16 Sept 2014, 6:06 am

ಮೈಸೂರು: ಮೈಸೂರಿನ ಕೋಟೆ ಮಾರಮ್ಮ ದೇವಸ್ಥಾನದ ಮೇಲೆ ಬೃಹತ್ ಗ್ರಾತದ ಮರವೊಂದು ಬಿದ್ದ ಪರಿಣಾಮ ಅವಶೇಷಗಳ ಅಡಿಯಲ್ಲಿ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಕೋಟೆ ಮಾರಮ್ಮ ದೇವಸ್ಥಾನ ಮೈಸೂರು ಅರಮನೆಗೆ ಹೊಂದಿಕೊಂಡಿತ್ತು. ಇಂದು ದೇವಾಲಯ ಮೇಲೆ ಹಳೆಯ ಮರವೊಂದು ಬಿದ್ದಿದೆ. ಈ ದುರಂತದಲ್ಲಿ ವೃದ್ಧೆ ಸುಶೀಲಮ್ಮ(60), ಶೈಲಜಾ(30) ಎಂಬುವರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಹಾವೊಂದು ಕಡಿದ ಪರಿಣಾಮ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಣಿ ಪ್ರಮೋದ ದೇವಿ ಭೇಟಿ
ಅರಮನೆ ದೇವಸ್ಥಾನದ ಮೇಲೆ ಮರ ಉರುಳಿಬಿದ್ದಿರುವ ಘಟನೆ ತಿಳಿಯುತ್ತದ್ದಂತೆ ಮೈಸೂರು ರಾಣಿ ಪ್ರಮೋದ ದೇವಿ ಅವರು ಘಟನಾಸ್ಥಳಕ್ಕೆ ಭೇಟಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement