ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೈಂಗಿಕ ಕಿರುಕುಳ: ಎಎಪಿ ಮುಖಂಡ ಮಯಾಂಕ್ ಗಾಂಧಿ ವಿರುದ್ಧ ಕೇಸ್

Vishwanath S
Updated On : 21 Sept 2014, 7:28 am

ನವದೆಹಲಿ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಪ್ ಮುಖಂಡ ಮಯಾಂಕ್ ಗಾಂಧಿ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

21 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಓಶಿವಾರಾ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ. ಎಎಪಿ ಕಾರ್ಯಕರ್ತ ತರುಣ್ ಸಿಂಗ್ ಪ್ರಮುಖ ಆರೋಪಿಯಾಗಿದ್ದಾರೆ. ಮಯಾಂಕ್ ಗಾಂಧಿ ಹಾಗೂ ಇತರ ನಾಲ್ವರು ಲೈಂಗಿಕ ಕಿರುಕುಳಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಏಪ್ರಿಲ್ ತಿಂಗಳಲ್ಲಿ ನಡೆದ ಪ್ರಕರಣ ಇದಾಗಿದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯಾಗಿದ್ದ ಈ ಯುವತಿಯ ಮೇಲೆ ಲೈಂಗಿಕ ಹಿಂಸೆ ನೀಡಲು ಪಕ್ಷದ ಕೆಲವು ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಈಕೆ ಈ ವಿಷಯವನ್ನ ಪಕ್ಷದ ಮುಖಂಡ ಮಾಯಾಂಕ್ ಗಾಂಧಿಯ ಗಮನಕ್ಕೆ ತಂದಿದ್ದಾಳೆ. ಆದರೆ, ಈಕೆ ಆರೋಪಿಸುವಂತೆ ಮಯಾಂಕ್'ರವರು ಏನೂ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ, ಈ ಯುವತಿ ಓಶಿವಾರಾ ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ದಾಖಲಿಸಿದ್ದಾಳೆ.

ಯುವತಿ ಮಾಡಿರುವ ದೂರು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಸತ್ಯಕ್ಕೆ ದೂರದ್ದಾಗಿದೆ ಎಂದು ಎಎಪಿ ಮುಖಂಡ ಮಯಾಂಕ್ ಗಾಂಧಿ ಹೇಳಿದ್ದಾರೆ. ಲೈಂಗಿಕ ಕಿರುಕುಳ ನಡೆದಿದೆ ಎಂದು ತನ್ನ ಗಮನಕ್ಕೆ ತಂದ ಬಳಿಕ ತರುಣ್'ನನ್ನ ಪಕ್ಷದಿಂದ ಕೂಡಲೇ ಅಮಾನತುಗೊಳಿಸಿದೆ. ಬಳಿಕ, ಆತನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತಾನು ನೀಡಿದ ಸಲಹೆಯನ್ನ ಆಕೆ ಸ್ವೀಕರಿಸಲಿಲ್ಲ ಎಂದು ಗಾಂಧಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement