ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವೇದ, ಉಪನಿಷತ್‌ನಲ್ಲಿ 'ಹಿಂದೂ' ಶಬ್ದವೇ ಇಲ್ಲ: ಮೊಯ್ಲಿ ವಿವಾದಿತ ಹೇಳಿಕೆ

'ಹಿಂದೂ' ಶಬ್ದ ಭಾರತದಲ್ಲ. ಯಾವ ವೇದ ಉಪನಿಷತ್‌ಗಳಲ್ಲೂ ಹಿಂದೂ ಪದದ ಉಲ್ಲೇಖವಿಲ್ಲ ಎಂದು ಹೇಳುವ ಮೂಲಕ...

Vishwanath S
Updated On : 21 Sept 2014, 5:19 am

ಬೆಂಗಳೂರು: ಹಿಂದೂ ಶಬ್ದ ಭಾರತದಲ್ಲ. ಯಾವ ವೇದ ಉಪನಿಷತ್‌ಗಳಲ್ಲೂ ಹಿಂದೂ ಪದದ ಉಲ್ಲೇಖವಿಲ್ಲ ಎಂದು ಹೇಳುವ ಮೂಲಕ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅವರು ವಿವಾದಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶಿವಮೂರ್ತಿ ಮುರುಘಾ ಶರಣರ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಮೊಯ್ಲಿ ಅವರು, ಭಾರತೀಯ ಸಂಸ್ಕೃತಿ, ವೇದ, ಉಪನಿಷತ್ತಿನಲ್ಲೂ ಹಿಂದೂ ಶಬ್ದ ಬರೆದಿಲ್ಲ. ಇದೆಲ್ಲ ಜನಾಂಗಗಳನ್ನು ಪ್ರತ್ಯೇಕಿಸಲು ಹಿಂದೂ ಶಬ್ದವನ್ನು ಬಳಕೆ ಮಾಡಲಾಗಿದೆ ಎಂದರು.

ಹಿಂದೂ ಪದ ಬಳಕೆಯಿಂದ ಭಾರತೀಯ ಸ್ವಾಭಿಮಾನಕ್ಕೆ ಅಪಾಯವಿದೆ. ಭಾರತೀಯ ಸಂಸ್ಕೃತಿಯ ಮಣ್ಣಿನಲ್ಲಿ ಹಿಂದೂ ಪದ ಹುಟ್ಟಿಲ್ಲ. ಭಾಷೆ, ಸಂಸ್ಕೃತಿ ಇತಿಹಾಸದಲ್ಲಿ ಹುಟ್ಟಿದ ಅಪಶಬ್ಧ, ಅಪಶಬ್ಧವನ್ನು ಸರಿ ಎಂದು ಬಳಸಿಕೊಂಡರೆ ಅದು ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ದೇ. ಜವರೇಗೌಡ ಅವರು, ಭಾರತದಲ್ಲಿ ಪುರೋಹಿತ್ಯ ವರ್ಗ ನಿರ್ಮೂಲನೆಯಾಗಬೇಕು ಆಗ ಮಾತ್ರ ದೇಶಕ್ಕೆ ಶಾಂತಿ ಎಂದು ಹೇಳಿಕೆ ನೀಡಿದ್ದಾರೆ. ಈ ಮಾತನ್ನು ಬಸವಣ್ಣ, ಕುವೆಂಪು ಕೂಡ ಹೇಳಿದ್ರು. ಆ ಮಾತು ನಿಜ ಕೂಡ. ಪೌರೋಹಿತ್ಯ ದಂತಹ ಕೆಟ್ಟ ಪದ್ದತಿಯನ್ನು ಕಿತ್ತೊಗೆಯಬೇಕು ಎಂದಿದ್ದಾರೆ.

ಮೊಯಿಲಿ ಹೇಳಿಕೆಗೆ ಆಕ್ಷೇಪ
ಹಿಂದೂ ಪದ ಭಾರತದಲ್ಲ ಎಂದು ಮೊಯ್ಲಿ ನೀಡಿರುವ ಹೇಳಿಕೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊಯ್ಲಿಯಂಥವರ ಈ ಹೇಳಿಕೆ ರೋಗಗ್ರಸ್ತ ಮನಸನ್ನ ಸೂಚಿಸುತ್ತದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement