ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಂಬುಗೆ ಕಿಸ್ ಮಾಡಿದ್ದು ನಾನಲ್ಲ: ಹರ್ಷಿಕಾ

ತಮಿಳು ನಟ ಸಿಂಬರಸನ್‌ಗೆ ಕಿಸ್ ಮಾಡಿದ್ದು...

Vishwanath S
Updated On : 22 Sept 2014, 8:33 am

ಬೆಂಗಳೂರು: ತಮಿಳು ನಟ ಸಿಂಬರಸನ್‌ಗೆ ಕಿಸ್ ಮಾಡಿದ್ದು ನಾನಲ್ಲ ಎಂದು ಸ್ಯಾಂಡಲ್‌ಪುಡ್ ನಟಿ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ.

ಮಲೇಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ಸಿಂಬುವಿನೊಂದಿಗೆ ಪರಿಚಯವಾಗಿತ್ತು. ನಾನು ಸಿಂಬುವಿನ ನಟನೆ ಮತ್ತು ಡ್ಯಾನ್ಸಿಂಗ್ ನೋಡಿ ಫುಲ್ ಖುಷ್ ಆಗಿದ್ದೆ. ಇದರ ನಡುವೆ ಸಿಂಬು ಜತೆ ಫೋಟೋ ತೆಗೆಸಿಕೊಂಡಿದ್ದನ್ನು ಬಿಟ್ಟರೆ ನಮ್ಮ ನಡುವೆ ಮತ್ಯಾವುದೇ ಅನುಬಂಧವಿರಲಿಲ್ಲ ಎಂದು ಹೇಳಿದ್ದಾರೆ.

ಒಂದೆಡೆ ಸಿಂಬುಗೆ ಕಿಸ್ ಮಾಡುತ್ತಿರುವುದು ನಾನಲ್ಲ ಎಂದು ಪೂಣಚ್ಚ ಹೇಳುತ್ತಿದ್ದರೆ ಮತ್ತೊಂದೆಡೆ ನಟ ಸಿಂಬು ಸಹ ಕಿಸ್ಸಿಂಗ್ ವಿಡಿಯೊದಲ್ಲಿರುವುದು ನಾನಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ವಿಡಿಯೋದಲ್ಲಿರುವುದು ಯಾರೆಂಬುದು ಸದ್ಯಕ್ಕೆ ಪ್ರಶ್ನಾರ್ಥಕವಾಗಿದೆ.

ಇತ್ತೀಚೆಗಷ್ಟೇ ಮಲೇಷ್ಯಾದಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಪ್ರಮುಖರು ಭಾಗಿಯಾಗಿದ್ದರು. ಮಲೇಷ್ಯಾದ ಹೊಟೇಲ್‌ವೊಂದರಲ್ಲಿ ಕುಡಿದ ಮತ್ತಿನಲ್ಲಿ ಸಿಂಬು ನಟಿಯೊಬ್ಬಳಿಗೆ ಮುತ್ತು ನೀಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಈ ವಿಡಿಯೋದಲ್ಲಿರುವುದು ಹರ್ಷಿಕಾ ಪೂಣಚ್ಚ ಎಂದು ಹೇಳಲಾಗಿತ್ತು. ಸದ್ಯ ಹಾಟ್ ಹಾಟ್ ಆಗಿರುವ ಕಿಸ್ಸಿಂಗ್ ವಿಡಿಯೋ ಯೂಟ್ಯೂಬ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement