ಭೂಸ್ವಾಧೀನ: ಮೇಲ್ಮನವಿ ಸಲ್ಲಿಸಲಿ
ರಾಜ್ಯದಲ್ಲಿನ ಅಕ್ರಮ ಭೂ ಒತ್ತುವಿರಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ...
ಹಾಸನ: ರಾಜ್ಯದಲ್ಲಿನ ಅಕ್ರಮ ಭೂ ಒತ್ತುವಿರಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಭೂ ಸ್ವಾಧೀನಕ್ಕೆ ಮುಂದಾಗಿದೆ.
ಈ ಬಗ್ಗೆ ಪುನರ್ ಪರಿಶೀಲನೆಗೆ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಮಾಜಿ ಪ್ರದಾನಿ ಎಚ್.ಡಿ ದೇವೇಗೌಡರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಭಾಗವಹಿಸುವ ಸೆ.23ರ ತುಮಕೂರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸೆ.23ರ ತುಮಕೂರು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಬೇಕು. ಅದು ಶಿಷ್ಟಾಚಾರ ಎಂದರು. ಅವರು ದೇಶಕ್ಕೆ ಪ್ರಧಾನಿಯೇ ಹೊರತು ಪಕ್ಷಕ್ಕಲ್ಲ ಎಂಬುದನ್ನು ಮರೆಯಬಾರದು ಎಂದೂ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದರು.