145 ಎಂವಿಐ ಅಧಿಕಾರಿಗಳ ನೇಮಕಾತಿ ರದ್ದು
ಬೆಂಗಳೂರು: 2006ನೇ ಸಾಲಿನ ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್ಫೆಕ್ಟರ್(ಎಂವಿಐ) ಹುದ್ದೆಯ 145 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಮಂಡಳಿ(ಕೆಎಟಿ)ಯ ಆದೇಶವನ್ನು ಮಂಗಳವಾರ ಹೈಕೋರ್ಟ್ ಎತ್ತಿ ಹಿಡಿದಿದೆ.
2006ರ ಆಗಸ್ಟ್ ತಿಂಗಳಲ್ಲಿ 245 ಎಂವಿಐ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಒಂದೇ ವಾರದಲ್ಲಿ ಆ ಹುದ್ದೆಗಳ ಸಂಖ್ಯೆಯನ್ನು 145ಕ್ಕೆ ಇಳಿಸಿ, ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ನೇಮಕಾತಿಯನ್ನು ರದ್ದುಗೊಳಿಸಿತ್ತು.
ಆಯ್ಕೆಯಾಗಿದ್ದ 145 ಅಭ್ಯರ್ಥಿಗಳು ಕೆಎಟಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಸಹ ಕೆಎಟಿ ಆದೇಶವನ್ನು ಎತ್ತಿ ಹಿಡಿದಿದೆ.