ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಾನವನ ಕಲ್ಪನೆ ಮೀರಿದ ಸಾಧನೆ: ಮೋದಿ

ಮಂಗಳನ ಕಕ್ಷೆ ತಲುಪಿದ 'ಮಾಮ್‌' ನೌಕೆ ಯಶಸ್ವಿಯಾಗುವುದರ ಮೂಲಕ ಮಾನವನ ಕಲ್ಪನೆ ಮೀರಿ...

ಸಾಂದರ್ಭಿಕ ಚಿತ್ರ
Mainashree
Updated On : 24 Sept 2014, 11:11 am

ಬೆಂಗಳೂರು: ಮಂಗಳನ ಕಕ್ಷೆ ತಲುಪಿದ 'ಮಾಮ್‌' ನೌಕೆ ಯಶಸ್ವಿಯಾಗುವುದರ ಮೂಲಕ ಮಾನವನ ಕಲ್ಪನೆ ಮೀರಿ ಸಾಧನೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮಂಗಳಯಾನ ಯಶಸ್ವಿಗೆ ಸಾಕ್ಷಿಯಾದ ಪ್ರಧಾನಿ ನರೇಂದ್ರ ಮೋದಿ, 'ಮಾಮ್‌' ಎಂದಿಗೂ ವಿಫಲವಾಗಲ್ಲ ಎಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ 7.52 ಸುಮಾರಿಗೆ 'ಮಾಮ್‌' ನೌಕೆ ಮಂಗಳನ ಕಕ್ಷೆ ಸೇರಿದ್ದು, ಪ್ರಧಾನಿ ಮೋದಿ ಯಶಸ್ವಿ ಸಾಧನೆಗೆ ಅಭಿನಂದಿಸಿದ್ದಾರೆ.

ನೌಕೆಗೆ ಚಿಕ್ಕದಾಗಿ 'ಮಾಮ್‌' ಎಂದು ಹೆಸರಿಡಲಾಗಿತ್ತು. 'ಮಾಮ್‌' ಎಂದಿಗೂ ವಿಫಲವಾಗಲ್ಲ ಎಂಬ ಭರವಸೆ ಇತ್ತು. ಇಂದು ಭಾರತ ಮಹತ್ತರ ಸಾಧನೆ ಮಾಡಿದೆ. ಇಸ್ರೋ ವಿಜ್ಞಾನಿಗಳಿಗೆ ಇಂತಹ ಸಾಧನೆ ಬಹಳ ಸುಲಭವಾಗಿದೆ. ಆದರೆ ಇಂತಹ ಸಾಧನೆ ಮಾಡುವಲ್ಲಿ, ಪ್ರಪಂಚದ 4ನೇ ದೇಶ ಭಾರತವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ನಮ್ಮ ವಿಜ್ಞಾನಿಗಳು ಇತಿಹಾಸ ನಿರ್ಮಿಸಿದ್ದಾರೆ. ಇಂತಹ ಯಶಸ್ಸಿಗೆ ವಿಜ್ಞಾನಿಗಳಿಗೆ ಹಾಗೂ ಭಾರತೀಯರಿಗೆ ಅಭಿನಂದಿಸುತ್ತೇನೆ. ಮೊದಲ ಯತ್ನದಲ್ಲೇ ಯಶಸ್ಸು ಸಾಧಿಸಿದ ರಾಷ್ಟ್ರ ಭಾರತ.

ನಾವು ಈ ಸಾಧನೆಯನ್ನು ಒಂದು ಬಾಲಿವುಡ್ ಚಿತ್ರಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾಡಿದ್ದೇವೆ. ಮಾನವನ ಕಲ್ಪನೆಗೂ ಮೀರಿ ನಾವು ಮುಂದೆ ಹೋಗಿದ್ದೇವೆ.
ಮಂಗಳಯಾನ ನಿಜಕ್ಕೂ ಒಂದು ಸಾಧನೆ ಎಂದು ಮೋದಿ ಹೇಳಿದ್ದಾರೆ.

ನೌಕ ನಿರ್ಮಾಣ ಅಭೂತಪೂರ್ವಾಗಿದೆ. ಇಸ್ರೋಗೆ ಸಾಧ್ಯವಾಗದನ್ನ ಸಾಧ್ಯವಾಗಿಸುವುದು ಗೊತ್ತು. ಅಸಾಧ್ಯವಾದುದನ್ನು ಸಾಧಿಸುವುದು ಅಭ್ಯಾಸವಾಗಿದೆ. ನಮ್ಮ ದೇಶದ ಈ ಸಾಧನೆ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಿದೆ ಎಂದ ಅವರು, ಪ್ರತಿಯೊಬ್ಬರು ಜೀವನದಲ್ಲಿ ವಿಜ್ಞಾನ ಅಳವಡಿಸಿಕೊಳ್ಳಬೇಕು, ಹಾಗಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಕರೆ ನೀಡಿದ್ದಾರೆ.

ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆಯ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement