ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುರಿದು ಬಿತ್ತೇ 'ಮಹಾ' ಮೈತ್ರಿ?

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸು...

Rashmi Kasaragodu
Updated On : 25 Sept 2014, 1:46 am

ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆಯೇ ಶಿವಸೇವೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದಿದೆ ಎಂದು ಗುರುವಾರ ಸುದ್ದಿಯಾಗಿದೆ.

ಶಿವಸೇನೆಯೊಂದಿಗೆ ಸೀಟು ಹಂಚಿಕೆ ಸಮಸ್ಯೆ ಪರಿಹರಿಯದೇ ಇರುವ ಕಾರಣ ಬಿಜೆಪಿ ಶಿವಸೇನೆಯೊಂದಿಗೆ ಇದ್ದ ತನ್ನ 25 ವರ್ಷಗಳ ಮೈತ್ರಿಯನ್ನು ಮುರಿದಿದೆ ಎಂದು ಬಿಜೆಪಿ ಮೂಲಗಳು ಹೇಳಿರುವುದಾಗಿ ಖ್ಯಾತ ಇಂಗ್ಲೀಷ್ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಕಳೆದ ಎರಡು ದಿನಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಂಬೈ ಭೇಟಿಯನ್ನು ಎರಡು ಬಾರಿ ರದ್ದುಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸೀಟು ಹಂಚಿಕೆ ಕಗ್ಗಂಟು ಪರಿಹರಿಸುವುದಕ್ಕಾಗಿ ಶಾ ಅವರು ಬುಧವಾರ ಶಿವ ಸೇನಾ ಮುಖ್ಯಸ್ಥ ಉದ್ಧವ್  ಠಾಕ್ರೆ ಅವರಲ್ಲಿ ಮಾತುಕತೆ ನಡೆಸುವವರಿದ್ದರು. ಆದರೆ ನಿನ್ನೆ ಅವರ ಭೇಟಿ ರದ್ದುಗೊಳಿಸಿದ್ದು, ಇಂದು ಬೆಳಗ್ಗೆ ಮಾತುಕತೆ ನಿಗದಿಯಾಗಿತ್ತು. ಆದರೆ ಇಂದು ಬೆಳಗ್ಗೆ ಶಾ ತಮ್ಮ ಭೇಟಿಯನ್ನು ಮತ್ತೆ ರದ್ದುಗೊಳಿಸಿದ್ದಾರೆ.

ಕಳೆದ ಲೋಕಸಭಾ ಚುನಾನಣೆ ಸಂದರ್ಭದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಸಣ್ಣಪಕ್ಷಗಳು ಸೇರ್ಪಡೆಯಾಗಿ ಮಹಾಮೈತ್ರಿಕೂಟ ರಚನೆಯಾಗಿತ್ತು.
ಶಿವಸೇನೆ ಮತ್ತು ಬಿಜೆಪಿ ಸೀಟು ಹಂಚಿಕೆ ಬಗ್ಗೆ ಕಳೆದ ಕೆಲವು ವಾರಗಳಿಂದ ಚರ್ಚೆಗಳು ನಡೆದು ಬರುತ್ತಿತ್ತು.  ಒಟ್ಟು 288 ಸೀಟುಗಳಲ್ಲಿ 151 ಸೀಟುಗಳು ಶಿವಸೇನೆಗಾದರೆ 130 ಸೀಟುಗಳು ಬಿಜೆಪಿಗೆ ಹಾಗು ಇನ್ನುಳಿದ 7 ಸೀಟುಗಳನ್ನು ಇತರ ಚಿಕ್ಕ ಪಕ್ಷಗಳಿಗೆ ನೀಡುವುದಾಗಿ ತೀರ್ಮಾನವಾಗಿತ್ತು.

ಆದರೆ ಈ ತೀರ್ಮಾನಕ್ಕೆ ಇತರ ಮಿತ್ರ ಪಕ್ಷಗಳು ಅಸಮಾಧಾನ ವ್ಯಕ್ತ ಪಡಿಸಿದ್ದು, ಮೈತ್ರಿ ಬಿಟ್ಟು ಹೋಗುವುದಾಗಿ ಬೆದರಿಕೆಯನ್ನೊಡ್ಡಿದ್ದವು.

ಆದಾಗ್ಯೂ, ರಾಷ್ಟ್ರೀಯ ಸಮಾಜ ಪಕ್ಷದ ಮಹಾದೇವ್ ಜನ್‌ಕಾರ್ ಅವರು ಇತರ ಮಿತ್ರ ಪಕ್ಷಗಳು ಈ ಹಿಂದೆ 18 ಸೀಟು ಬೇಕೆಂದು ಪಟ್ಟು ಹಿಡಿದಿದ್ದು, ಈಗ ಪಟ್ಟು ಸಡಿಲಿಸಿ 14 ಸೀಟುಗಳಿಗೆ ತೃಪ್ತಗೊಂಡಿವೆ ಎಂದು ಹೇಳಿಕೆ ನೀಡಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement