ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಹಾ ಮೈತ್ರಿ ಮುರಿದಿಲ್ಲ: ಬಿಜೆಪಿ, ಶಿವಸೇನೆ

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆಯೇ ಶಿವಸೇವೆ ಮತ್ತು ಬಿಜೆಪಿ...

Rashmi Kasaragodu
Updated On : 25 Sept 2014, 1:33 am

ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆಯೇ ಶಿವಸೇವೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದಿದೆ. ಶಿವಸೇನೆಯೊಂದಿಗೆ ಸೀಟು ಹಂಚಿಕೆ ಸಮಸ್ಯೆ ಪರಿಹರಿಯದೇ ಇರುವ ಕಾರಣ ಬಿಜೆಪಿ ಶಿವಸೇನೆಯೊಂದಿಗೆ ಇದ್ದ ತನ್ನ 25 ವರ್ಷಗಳ ಮೈತ್ರಿಯನ್ನು ಮುರಿದಿದೆ ಎಂದು ಬಿಜೆಪಿ ಮೂಲಗಳು ಹೇಳಿರುವುದಾಗಿ ಖ್ಯಾತ ಇಂಗ್ಲೀಷ್ ಸುದ್ದಿವಾಹಿನಿಯೊಂದು ವರದಿ ಮಾಡಿತ್ತು.

ಆದರೆ ಈ ವರದಿಯನ್ನು ಬಿಜೆಪಿ ಮತ್ತು ಶಿವಸೇನೆ ನಿರಾಕರಿಸಿದೆ. ಈ ಬಗ್ಗೆ ಇನ್ನೂ ಮಾತುಕತೆ ಮುಂದುವರಿದಿದೆ ಎಂದು ಉಭಯ ಪಕ್ಷಗಳು ಗುರುವಾರ ಹೇಳಿಕೆ ನೀಡಿವೆ.

ಅಕ್ಟೋಬರ್ 15ಕ್ಕೆ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸೀಟು ಹಂಚಿಕೆಯ ಬಗ್ಗೆ ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಏನೇ ಆಗಲಿ ಮಿತ್ರ ಪಕ್ಷಗಳೆಲ್ಲವೂ ನಮ್ಮೊಂದಿಗೇ ಇವೆ ಎಂದು ಗುರುವಾರ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಹೇಳಲಾಗಿದೆ.

ಏತನ್ಮಧ್ಯೆ, ಬಿಜೆಪಿಯೊಂದಿಗೆ ಮೈತ್ರಿ ಹೊಂದುವುದೇ ಉತ್ತಮ ಎಂದು ಚಿಕ್ಕ ಪುಟ್ಟ ಪಕ್ಷಗಳಿಗೆ ಮನವರಿಕೆಯಾಗಿದೆ ಎಂದು ಹಿರಿಯ ಬಿಜೆಪಿ ನೇತಾರರೊಬ್ಬರು ಹೇಳಿದ್ದಾರೆ.

ಕೇಂದ್ರದಲ್ಲಾಗಲೀ, ರಾಜ್ಯ ಸಭಾ ಅಥವಾ ಸರ್ಕಾರದ ಇನ್ಯಾವುದೇ  ಸ್ಥಾನವಿರಲಿ ಅಧಿಕಾರ ಚಲಾವಣೆ ಬಿಜೆಪಿಯಿಂದಲೇ ಸಾಧ್ಯ ಎಂದು ಇತರ ಪಕ್ಷಗಳಿಗೆ ತಿಳಿದಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ಸುದ್ದಿಮೂಲಗಳಿಗೆ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement