ಧನಿಕರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಗೆ ಪ್ರಥಮ ಸ್ಥಾನ
ಫೋರ್ಬ್ ನಿಯತಕಾಲಿಕದ 100 ಧನಿಕರ ಪಟ್ಟಿಯಲ್ಲಿ ಭಾರತದ ಉದ್ಯಮಿ ಮುಖೇಶ್ ಅಂಬಾನಿ ಪ್ರಥಮ ಸ್ಥಾನ...
ನವದೆಹಲಿ: ಫೋರ್ಬ್ ನಿಯತಕಾಲಿಕದ 100 ಧನಿಕರ ಪಟ್ಟಿಯಲ್ಲಿ ಭಾರತದ ಉದ್ಯಮಿ ಮುಖೇಶ್ ಅಂಬಾನಿ ಪ್ರಥಮ ಸ್ಥಾನಗಳಿಸಿದ್ದಾರೆ.
23.6 ಬಿಲಿಯನ್ ಡಾಲರ್ ಆದಾಯಹೊಂದಿರುವ ಆರ್ಐಎಲ್ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ ಎಂಟನೇ ವರ್ಷ ಈ ಪಟ್ಟಿಯಲ್ಲಿ ಮೊದಲ ಸ್ಥಾನಗಳಿಸುತ್ತಿದ್ದಾರೆ. ಅದೇ ವೇಳೆ ಇದೇ ಮೊದಲ ಬಾರಿಗೆ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಗಳಿಸಿರುವ ಭಾರತೀಯರೆಲ್ಲರೂ ಬಿಲಿಯನರ್ಗಳೇ ಆಗಿದ್ದಾರೆ.
ಅಂಬಾನಿಯ ನಂತರದ ಸ್ಥಾನದಲ್ಲಿ ದಿಲೀಪ್ ಸಂಘ್ವಿ ಮತ್ತು 5ನೇ ಸ್ಥಾನವನ್ನು ಲಕ್ಷ್ಮೀ ಮಿತ್ತಲ್ ಗಳಿಸಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ವಿಪ್ರೋದ ಅಜೀಂ ಪ್ರೇಮ್ಜಿ, ನಾಲ್ಕನೇ ಸ್ಥಾನದಲ್ಲಿ ಶಪೂರ್ಜೀ ಪಲ್ಲೋಂಜಿ ಇದ್ದಾರೆ.