ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಹಾರಾಷ್ಟ್ರ: ಎನ್‘ಸಿಪಿ-ಕಾಂಗ್ರೆಸ್ ಮೈತ್ರಿಯೂ ಅಂತ್ಯ

Vishwanath S
Updated On : 25 Sept 2014, 9:05 am

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ರಾಜಕೀಯದಲ್ಲಿ ಬಿರುಗಾಳಿ ಬೀಸಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎರಡು ಪ್ರಮುಖ ಮೈತ್ರಿ ಕೊನೆಗೊಂಡಿದೆ. ಮಧ್ಯಾಹ್ನ ಬಿಜೆಪಿ ನಾಯಕರು ನಡೆಸಿದ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಶಿವಸೇನೆ ಜೊತೆಗಿನ 25 ವರ್ಷಗಳ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಿತ್ತು.

ಇದರ ಬೆನ್ನಲ್ಲೇ 15 ವರ್ಷಗಳ ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಸಹ ಅಂತ್ಯಗೊಂಡಿದೆ. ವಿಧಾನಸಭೆ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿಯೇ ಇಲ್ಲಿಯೂ ಮೈತ್ರಿಗೆ ಮುಳ್ಳು ಬಿದ್ದಿದೆ. ಪ್ರತಿ ಸಾರಿ ಕಾಂಗ್ರೆಸ್ ನವರೇ ಸಿಎಂ ಆಗುತ್ತಿದ್ದಾರೆ, ಈ ಬಾರಿ ಎನ್ ಸಿಪಿಗೆ ಸಿಎಂ ಸ್ಥಾನ ಸಿಗಬೇಕೆಂಬುದು ಎನ್ ಸಿಪಿ ನಾಯಕರ ಒತ್ತಾಯವಾಗಿತ್ತು. ಇದಕ್ಕೆ ಕಾಂಗ್ರೆಸ್ ಒಪ್ಪದ ಹಿನ್ನೆಲೆಯಲ್ಲಿ ಮೈತ್ರಿ ಕಡಿದುಕೊಂಡಿರುವುದಾಗಿ ಎನ್ ಸಿಪಿ ಘೋಷಿಸಿದೆ.

‘ನಾವು ಸದಾ ಕಾಂಗ್ರೆಸ್​ಗೆ ಬೆಂಬಲ ನೀಡಿದ್ದೇವೆ, 15 ವರ್ಷಗಳಿಂದ ಕಾಂಗ್ರೆಸ್​ ಮಾತ್ರ ಅಧಿಕಾರ ಅನುಭವಿಸಿದೆ ಕಾಂಗ್ರೆಸ್​ ಪಕ್ಷದವರೇ ಮುಖ್ಯಮಂತ್ರಿ ಆಗುತ್ತಿದ್ದಾರೆ, ಕಾಂಗ್ರೆಸ್​ ನಮ್ಮ ಪಕ್ಷವನ್ನು ನಿರ್ಲಕ್ಷ್ಯಿಸುತ್ತಿದೆ, 1999ರಿಂದ ನಮ್ಮ ಬೆಂಬಲವಿಲ್ಲದೇ ಕಾಂಗ್ರೆಸ್​ ಸರ್ಕಾರ ರಚಿಸಲಾಗಿಲ್ಲ ಎಂದು ಮುಂಬೈನಲ್ಲಿ ಎನ್​ಸಿಪಿ ನಾಯಕ ಪ್ರಫುಲ್​ ಪಟೇಲ್​ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement