ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲರು ಒಂದಾಗಬೇಕು: ಪ್ರಧಾನಿ ಮೋದಿ

ಜಗತ್ತಿನಲ್ಲಿ ಭಯೋತ್ಪಾದನೆ ದೊಡ್ಡ ಶಕ್ತಿ...

Vishwanath S
Updated On : 28 Sept 2014, 10:01 am

ನ್ಯೂಯಾರ್ಕ್: ಜಗತ್ತಿನಲ್ಲಿ ಭಯೋತ್ಪಾದನೆ ದೊಡ್ಡ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿದೆ. ಹೀಗಾಗಿ ಭಯೋತ್ಪಾದನೆಯನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಗೆ ತೆರಳಿರುವ ಅವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದರು. ಹಿಂದಿಯಲ್ಲೇ ಭಾಷಣ ಆರಂಭಿಸಿದ ಮೋದಿ, ವಿಶ್ವದಲ್ಲಿ ಭಯೋತ್ಪಾದನೆ ಬರ ಬರುತ್ತಾ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಭಯೋತ್ಪಾದನೆ ನಾನಾ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದು, ಈ ವಿಷ ಬೀಜವನ್ನು ಬುಡ ಸಮೇತ ಕಿತ್ತು ಹಾಕಲು ಪ್ರತಿಯೊಬ್ಬರು ಒಂದಾಗಬೇಕು ಆಗ ಮಾತ್ರ ದೇಶಕ್ಕೆ ಮುಕ್ತಿ. ವಿಶ್ವಕ್ಕೆ ಶಾಂತಿ ಮತ್ತು ಭದ್ರತೆಯ ಅವಶ್ಯಕತೆ ಇದೆ ಎಂದರು.

ಭಯೋತ್ಪಾದನೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿದ್ದು, ಸಣ್ಣ ದೊಡ್ಡ ರಾಷ್ಟ್ರಗಳೆನ್ನದೇ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಉಗ್ರರ ಬೆದರಿಕೆ ಇದೆ. ಇಂತ ದುಷ್ಟಶಕ್ತಿಗಳು ಹೆಚ್ಚು ಪ್ರಬಲವಾಗುವುದಕ್ಕೂ ಮುನ್ನು ಅಂತವುಗಳನ್ನು ತೊಡೆದುಹಾಕಬೇಕಿದೆ ಎಂದು ಮೋದಿ ಹೇಳಿದರು.

ಪಾಕ್ ಜೊತೆ ದ್ವಿಪಕ್ಷೀಯ ಮಾತುಕತೆ ಭಾರತ ಸಿದ್ಧ
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮೋದಿ ಅವರು, ಪಾಕಿಸ್ತಾನದ ಕಿವಿ ಹಿಂಡಿದರು. ಭಯೋತ್ಪಾದನೆಯ ನೆರಳು ಇಲ್ಲದೆ "ಶಾಂತಿಯುತ ವಾತಾವರಣದಲ್ಲಿ ಪಾಕ್ ಜೊತೆ ದ್ವಿಪಕ್ಷೀಯ ಮಾತುಕತೆ ಭಾರತ ಸಿದ್ಧವಿದೆ. ಆದರೆ ಅಂತಹ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಪಾಕ್ ಮೇಲಿದೆ. ಇಂತಹ ನಿರ್ಭೀತ ವಾತಾವರಣವನ್ನು ಪಾಕ್ ನಿರ್ಮಾಣ ಮಾಡಿದರೆ ಉಭಯ ದೇಶಗಳ ನಡುವಿನ ಸಮಸ್ಯೆಗಳ ಕುರಿತು ಮಾತುಕತೆ ನಡೆಸಬಹುದು ಎಂದರು.

ಪ್ರವಾಹದಿಂದ ಜಮ್ಮು ಮತ್ತು ಕಾಶ್ಮೀರ ನಲುಗಿದ್ದು, ಲಕ್ಷಾಂತರ ಮಂದಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರ ಗಡಿ ಸಮಸ್ಯೆಗಿಂತ ಸಂತ್ರಸ್ತರ ಬಗ್ಗೆ ಗಮನಹರಿಸುವುದೆ ನಮಗೆ ಮುಖ್ಯವಾಗಿದೆ ಎಂದರು.

ವಸುದೈವ ಕುಟುಂಬಂ ನಮ್ಮ ವಿದೇಶಿ ಮಂತ್ರ: ಮೋದಿ

ಭಾರತ ವಸುದೈವ ಕುಟುಂಬಂ ತತ್ವವನ್ನು ಪಾಲಿಸುತ್ತದೆ. ವಿಶ್ವವನ್ನು ಒಂದೇ ಕುಟುಂಬದಂತೆ ಕಾಣುವ ಮನೋಧರ್ಮ ಭಾರತೀಯರದ್ದು ಎಂದರು. ಭಾರತ ಆರ್ಥಿಕ, ಸಾಮಾಜಿಕತೆಯಿಂದ ಬದಲಾವಣೆಯಾಗುತ್ತಿದೆ. ನಮ್ಮ ಭವಿಷ್ಯ ನಮ್ಮ ನೆರೆ ರಾಷ್ಟ್ರಗಳೊಂದಿಗೆ ಬೆಸೆದುಕೊಂಡಿದೆ ಹೀಗಾಗಿ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಅತಿಮುಖ್ಯ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement