ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಮೋದಿ'ಸನ್ ಸ್ಕ್ವೇರ್‌ನಲ್ಲಿ ಮೋಡಿ

ಭಾರತ್ ಮಾತಾ ಕಿ, ಜೈ. ಭಾರತ್ ಮಾತಾ ಕಿ ಜೈ... ಉಪವಾಸ ಇರುವುದು ನನಗೆ, ನಿಮಗಲ್ಲ, ಇನ್ನೂ ಜೋರಾಗಿ ಹೇಳಿ..

Vishwanath S
Updated On : 29 Sept 2014, 12:49 pm

ಭಾರತ್ ಮಾತಾ ಕಿ, ಜೈ. ಭಾರತ್ ಮಾತಾ ಕಿ ಜೈ... ಉಪವಾಸ ಇರುವುದು ನನಗೆ, ನಿಮಗಲ್ಲ, ಇನ್ನೂ ಜೋರಾಗಿ ಹೇಳಿ, ಭಾರತ್ ಮಾತಾ ಕಿ ಜೈ...

ದೇಶದ ಪ್ರಧಾನಿಯೊಬ್ಬರ ಭಾಷಣವನ್ನು ಅನಿವಾಸಿ ಭಾರತೀಯ ಸಮುದಾಯ ಇಷ್ಟೊಂದು ತಲ್ಲೀನತೆಯಿಂದ ಆಲಿಸಿದ್ದು ಬಹುಶಃ ಇದೇ ಮೊದಲು. ಮೋದಿ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಮಾಡಿದ್ದು ಕೇವಲ ಒಂದು ಭಾಷಣವಾಗಿರಲಿಲ್ಲ. ತಾಯ್ನೆಲದ ಕುರಿತು ಅವರಲ್ಲಿ ಪ್ರೀತಿ ಮತ್ತು ತುಡಿತವನ್ನು ಬಡಿದೆಬ್ಬಿಸುವ ಪ್ರೀತಿಯ ಹಿತನುಡಿಯೂ ಅದರಲ್ಲಿ ಅಡಗಿತ್ತು. ಅಮೆರಿಕದ ನೆಲದಲ್ಲಿ ನಿಂತು 21ನೇ ಶತಮಾನ ಭಾರತದ್ದು ಎಂಬುದನ್ನು ಘಂಟಾಘೋಷವಾಗಿ ಸಾರಿದರು ಮೋದಿ.

* ಅಮೆರಿಕದ 50 ಸಂಸದರು ಮತ್ತು ಸೆನೆಟರ್‌ಗಳು ಪಾಲ್ಗೊಂಡಿದ್ದರು.
* ಮೋದಿ ಕಾರ್ಯಕ್ರಮದಲ್ಲಿ ಬೊಹ್ರಾ ಮುಸ್ಲಿಂ ಸಮುದಾಯದ ಮುಖಂಡರೂ ಇದ್ದರು.
* ಮೋದಿ ಭಾಷಣ ಭಾರತದಲ್ಲಷ್ಟೇ ಅಲ್ಲ, ವಿಶ್ವದ 80 ದೇಶಗಳಲ್ಲೂ ನೇರಪ್ರಸಾರವಾಗಿದ್ದು ವಿಶೇಷ.
* ಮೋದಿ ಭಾಷಣ ಅಮೆರಿಕದ ವಿಶ್ವವಿಖ್ಯಾತ ಟೈಂ ಸ್ಕ್ವೇರ್‌ನಲ್ಲಿ ಪ್ರಸಾರವಾದದ್ದೂ ಮತ್ತೊಂದು * ವಿಶೇಷ.
* ಮೋದಿ ಒಂದು ಗಂಟೆ ಮಾತನಾಡಲಿದ್ದಾರೆ ಎಂದು ಮೊದಲು ಎಲ್ಲರೂ ಭಾವಿಸಿದ್ದರು. ಆದರೆ, ಅವರು ಮಾತನಾಡಿದ್ದು ಬರೊಬ್ಬರಿ 75 ನಿಮಿಷ!
* ತಮ್ಮ ಒಂದೂಕಾಲು ಗಂಟೆಯ ಭಾಷಣದಲ್ಲಿ ಮಂಗಳನಿಂದ ಅಹಮಬಾದ್‌ವರೆಗೆ, ಸ್ವಚ್ಛೆತೆಯಿಂದ ಕಂಪ್ಯೂಟರ್‌ವರೆಗೆ ಎಲ್ಲ ವಿಚಾರಗಳ ಕುರಿತೂ ಪ್ರಸ್ತಾಪಿಸಿದರು.

* ಅಮೆರಿಕದಲ್ಲಿರುವ ಎಲ್ಲ ಭಾರತೀಯರಿಗೂ ನವರಾತ್ರಿ ಶುಭಾಶಯಗಳು.

* ಚುನಾವಣೆಯಲ್ಲಿ ಗೆಲ್ಲುವುದೆಂದರೆ ಖುರ್ಚಿಯಲ್ಲಿ ವಿರಾಜಮಾನರಾಗುವುದು , ಉನ್ನತ ಹುದ್ದೆ ಪಡೆಯುವುದಲ್ಲ. ಬದಲಾಗಿ ಹೊಣೆಗಾರಿಕೆ ಎಂದು ನಂಬಿದ್ದೇನೆ. ಹಾಗಾಗಿಯೇ ಅಧಿಕಾರಕ್ಕೇರಿದ ಬಳಿಕ ಕನಿಷ್ಠ 15 ನಿಮಿಷಗಳ ಬಿಡುವನ್ನೂ ನಾನು ಬಯಸಿಲ್ಲ.

* ನಿಮ್ಮಲ್ಲಿ ಅನೇಕರು ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದಿದ್ದೀರಿ. ಆಗ ನಿಮಗೆ ಧನ್ಯವಾದ ಹೇಳಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈಗ ಹೇಳುತ್ತಿದ್ದೇನೆ.

* ಒಂದು ಕಾಲದಲ್ಲಿ ಭಾರತವನ್ನು ಹಾವಾಡಿಗರ ದೇಶ ಎನ್ನಲಾಗುತ್ತಿತ್ತು. ನೀವಿಲ್ಲದಿರುತ್ತಿದ್ದರೆ ಈ ಭಾವನೆ ಇಂದಿಗೂ ಬದಲಾಗುತ್ತಿರುಲಿಲ್ಲ. ಆಗ ಹಾವಿನೊಂದಿಗೆ ಆಡುತ್ತಿದ್ದೇವು. ಈಗ ಮೌಸ್(ಇಲಿ)ನೊಂದಿಗೆ ಆಡುತ್ತಿದ್ದೇವೆ. ನಾವು ಮೌಸ್ ಅಲ್ಲಾಡಿಸಿದರೆ ಇಡೀ ವಿಶ್ವವೇ ನಮ್ಮತ್ತ ನೋಡುತ್ತದೆ.

* ಇಲ್ಲಿ ಕುಳಿತಿರುವ ಎಲ್ಲರೂ ಭಾರತದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ ಎಂದು ನನಗೆ ಗೊತ್ತು. ಭಾರತದಲ್ಲೂ ಅಷ್ಟೆ, ನಮ್ಮ ಜನರು ಸರ್ಕಾರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾನೀಗ ಭರವಸೆ ನೀಡುವುದೇನೆಂದರೆ, ಎಲ್ಲ ಜನರ ಕನಸುಗಳು ಹಾಗೂ ಇಚ್ಛೆಯನ್ನು ನಾನು ಈಡೇರಿಸುತ್ತೇನೆ.

* ಬದಲಾವಣೆಗಳು ಶುರುವಾಗುತ್ತಿದೆ, ಹಾಗಾಗಿ ಎಲ್ಲರೂ ಭಾರತಕ್ಕೆ ವಾಪಸ್ ಬನ್ನಿ ಎಂದು ನಾನು ಗುಜರಾತ್ ಸಿಎಂ ಆಗಿದ್ದಾಗ ಕರೆನೀಡಿದೆ. ಆದರೆ ಈಗ ನಾನು ಬಹಳ ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ-ಇಲ್ಲಿ ಕುಳಿತಿರುವ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ಒಂದು ಬಾರಿಯಾದೂರ ಭಾರತದ ಮಣ್ಣಲ್ಲಿ ಕಾಲಿಡಬೇಕು.

* 21ನೇ ಶತಮಮಾನವು ಏಷ್ಯಾಗೆ ಸೇರಿದ್ದು. ಜಗತ್ತಿಗೆ ನಾಯಕತ್ವ ಕೊಡುವ ಸಾಮರ್ಥ್ಯವಿರುವ ಏಷ್ಯಾದ ಏಕೈಕ ದೇಶ ಭಾರತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement