ಮಹಾ ಚುನಾವಣೆ: ಬಿಜೆಪಿ ಅಬ್ಬರದ ಪ್ರಚಾರ ಶುರು
ಶಿವಸೇನೆಯೊಂದಿಗಿನ 25 ವರ್ಷದ ಮೈತ್ರಿ ಮುರಿದ ನಂತರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ....
ಮುಂಬೈ: ಶಿವಸೇನೆಯೊಂದಿಗಿನ 25 ವರ್ಷದ ಮೈತ್ರಿ ಮುರಿದ ನಂತರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಬಿಜೆಪಿ ಸೋಮವಾರ ಅಬ್ಬರದ ಪ್ರಚಾರವನ್ನು ಆರಂಭಿಸಿದೆ.
ಸೋಮವಾರ ಎರಡು ಬೃಹತ್ ರ್ಯಾಲಿಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ.
ಬಿಜೆಪಿ ತಮ್ಮ ಪ್ರಚಾರ ಕಾರ್ಯಕ್ಕೆ ಮುಲುಕ್ ಮೈದಾನ್ ಎಂದು ಹೆಸರಿಟ್ಟಿದ್ದು, ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ 300 ರ್ಯಾಲಿಗಳನ್ನು ನಡೆಸಲಿವೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರ್ಯಾಲಿ ನಡೆಸಲಿದ್ದು ನಾವು ಎಲ್ಲ ಮತದಾರರನ್ನು ತಲುಪುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ದಕ್ಷಿಣ ಮಹಾರಾಷ್ಟ್ರದಲ್ಲಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಸತಾರಾ ಮತ್ತು ಸಂಗಲಿಯಲ್ಲಿ ಬಿಜೆಪಿ ದೇಶೀಯ ಉಪಾಧ್ಯಕ್ಷ ಪುರುಷೋತ್ತಮ್ ರುಪಾಲಾ ಮತ್ತು ಪುಣೆಯಲ್ಲಿ ಕೇಂದ್ರ ಮಾನವ ಸಂಪಲ್ಮೂಲ ಸಚಿವೆ ಸ್ಮ್ಛತಿ ಇರಾನಿ ರ್ಯಾಲಿಯ ನೇತೃತ್ವ ವಹಿಸಲಿದ್ದಾರೆ.
ಮುಂಬೈನಲ್ಲಿ ಮಾಜಿ ಸಂಸದ ಮತ್ತು ಕ್ರಿಕೆಟರ್ ನವ್ಜೋತ್ ಸಿಂಗ್ ಸಿದ್ದು, ಲಾತುರ್ ಮತ್ತು ಸೋಲಾಪುರ್ ನಲ್ಲಿ ಬಿಜೆಪಿ ದೇಶೀಯ ಕಾರ್ಯದರ್ಶಿ ಮುರಳೀಧರ್ ರಾವ್, ಥಾಣೆಯಲ್ಲಿ ದೇಶೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೇ, ನಾಶಿಕ್ನಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜವಡೇಕರ್ ನೇತೃತ್ವ ವಹಿಸಲಿದ್ದಾರೆ.