ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೂಡಿಕೆ ಆಕರ್ಷಣೆಗಾಗಿ ಸಿಇಒಗಳ ಜತೆ ಚರ್ಚೆ

ಜಪಾನ್, ಚೀನಾ ಆಯ್ತು, ಈಗ ...

Rashmi Kasaragodu
Updated On : 30 Sept 2014, 10:49 am

ಜಪಾನ್, ಚೀನಾ ಆಯ್ತು, ಈಗ ಅಮೆರಿಕದಿಂದಲೂ ಭಾರಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ಹೆಜ್ಜೆಯಿಟ್ಟಿದ್ದಾರೆ. ಅಮೆರಿಕದ ಪ್ರಮುಖ ಸಿಇಒಗಳ ಜತೆ ಸೋಮವಾರ ಮಾತುಕತೆ ನಡೆಸಿದ ಪ್ರಧಾನಿ ಮೋದಿ ನಮ್ಮ ದೇಶವು ಮುಕ್ತ ಮನಸ್ಸು ಹೊಂದಿದ್ದು, ಬದಲಾವಣೆಗೆ ಸಿದ್ಧವಾಗಿದೆ ಎಂದು ಹೇಳಿದರು.ಈ ಮೂಲಕ ಭಾರತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗವಕಾಶ ಸೃಷ್ಟಿಗಾಗಿ ಬಂಡವಾಳ ಹೂಡಿಕೆ ಮಾಡುವಂತೆ ಸಿಇಒಗಳಿಗೆ ಕರೆ ನೀಡಿದರು. ಭಾರತೀಯ ಮೂಲದ ಪೆಪ್ಸಿಕೋ ಸಿಇಒ ಇಂದ್ರಾ ನೂಯಿ,ಗೂಗಲ್ ಮುಖ್ಯಸ್ಥ ಎರಿಕ್ ಶಿಮಿಟ್, ಸಿಟಿಗ್ರೂಪ್ ಮುಖ್ಯಸ್ಥ ಮೈಕೆಲ್ ಕಾರ್ಬೆಟ್ ಸೇರಿದಂತೆ ಪ್ರಮುಖ ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದ ಅವರು , ಕಲ್ಲಿದ್ದಲು ಬ್ಲಾಕ್ ಹಂಚಿಕೆ ರದ್ದು ಮಾಡಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಈ ವೇಳೆ ಪ್ರಸ್ತಾಪಿಸಿದರು. ಜತೆಗೆ ನಾವು ಈ ತೀರ್ಪನ್ನು ಹಿಂದೆ ಆದ ತಪ್ಪುಗಳನ್ನು ಸ್ವಚ್ಛಗೊಳಿಸಿ ಮುನ್ನಡೆಯಲು ಅನುಕೂಲವಾಗುವಂತೆ ಪರಿವರ್ತಿಸುತ್ತೇವೆ ಎಂದರು. ಇದು ಪ್ರಧಾನಿ ಅವರು ಅಮೆರಿಕದಲ್ಲಿ ಉದ್ಯಮಿಗಳೊಂದಿಗೆ ನಡೆಸಿದ ಮೊದ ವಿಸ್ಕೃತ ಚರ್ಚೆಯಾಗಿದೆ. ಮಂಗಳವಾರವೂ ಅವರು ವಾಷಿಂಗ್ಟನ್‌ನಲ್ಲಿ ಉದ್ದಿಮೆದಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement