ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಥ್ಯಾಂಕ್ಯೂ ಅಮೆರಿಕ: ಮೋದಿ

ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಮರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ...

Rashmi Kasaragodu
Updated On : 1 Oct 2014, 3:59 am

ವಾಷಿಂಗ್ಟನ್: ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಮರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಪ್ರವಾಸ ಯಶಸ್ವಿ ಹಾಗು ಸಮಾಧಾನಕರವಾಗಿತ್ತು ಎಂದು ಹೇಳಿ ಅಮೆರಿಕಾಗೆ ಧನ್ಯವಾದವನ್ನರ್ಪಿಸಿದ್ದಾರೆ.

ಮಂಗಳವಾರ ಯುನೈಟೆಡ್ ನೇಷನ್ಸ್ ಇಂಡಿಯನ್ ಬ್ಯುಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ)  ಆಯೋಜಿಸಿದ ಅಧಿಕೃತ ಸಮಾರಂಭವೊಂದರಲ್ಲಿ ಭಾಗವಹಿಸಿದ ಮೋದಿ ಥ್ಯಾಂಕ್ಯೂ ಅಮೆರಿಕ ಎಂದು ಹೇಳಿದ್ದಾರೆ.

ಅಲ್ಲಿಂದ ನೇರವಾಗಿ ಆ್ಯಂಡ್ರ್ಯೂಸ್ ವಿಮಾನ ನಿಲ್ದಾಣಕ್ಕೆ ಬಂದ ಮೋದಿ ಏರ್ ಇಂಡಿಯಾ ವಿಮಾನದಲ್ಲಿ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು.

ಸಮಾರಂಭದಲ್ಲಿ ಮಾತನಾಡಿದ ಮೋದಿ, ನನ್ನ ಪ್ರವಾಸ ಯಶಸ್ವಿಯಾಗಿದ್ದು, ನಾನು ಇಲ್ಲಿಂದಲೇ ವಿಮಾನ ನಿಲ್ದಾಣಕ್ಕೆ ಹೋಗುತ್ತೇನೆ ಎಂದಿದ್ದರು.

ಮಂಗಳವಾರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಮೋದಿ ಭೇಟಿ ಮಾಡಿದ್ದರು. ಭಾರತ ಮತ್ತು ಅಮೆರಿಕದ ಸಂಬಂಧವನ್ನು ಗಟ್ಟಿಗೊಳಿಸಿ ಜತೆ ಜತೆಯಾಗಿಯೇ ಹೆಜ್ಜೆಯಿಡೋಣ ಎಂದು ಮೋದಿ-ಒಬಾಮ ಜಂಟಿಯಾಗಿ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement