ಪ್ರಧಾನ ಸುದ್ದಿ

ಗೋವಾ ಟ್ರಯಲ್ ರೂಮ್ ಪ್ರಕರಣ: ಫ್ಯಾಬ್ ಇಂಡಿಯಾ ಹಿರಿಯ ಅಧಿಕಾರಿಗಳಿಗೆ ನೋಟಿಸ್

Guruprasad Narayana

ಪಣಜಿ: ಗೋವಾ ಫ್ಯಾಬ್ ಇಂಡಿಯಾ ಟ್ರಯಲ್ ರೂಮಿನಲ್ಲಿ ಕ್ಯಾಮಾರಾ ಅಡಗಿಸಿಟ್ಟಿದ್ದರು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ದೂರು ನೀಡಿರುವ ಹಿನ್ನಲೆಯಲ್ಲಿ ಫ್ಯಾಬ್ ಇಂಡಿಯಾದ ಹಿರಿಯ ಅಧಿಕಾರಿಗಳನ್ನು ಗೋವಾ ಪೊಲೀಸರು ನಾಳೆ ಪ್ರಶ್ನಿಸಲಿದ್ದಾರೆ.

ರಾಜ್ಯದ ಕ್ರೈಂ ಬ್ರಾಂಚ್, ಫ್ಯಾಬ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರತಾ ದತ್ತಾ ಮತ್ತು ಕಾರ್ಯ ನಿರ್ವಾಹಕಾ ನಿರ್ದೇಶಕ ವಿಲ್ಲಿಯಮ್ ಬಿಸ್ಸೆಲ್ ಅವರಿಗೆ ತನಿಖೆಗಾಗಿ ಹಾಜರಿರುವಂತೆ ನೋಟಿಸ್ ನೀಡಿದೆ.

"ಇಬ್ಬರೂ ತನಿಖಾದಿಕಾರಿಗಳ ಮುಂಜೆ ಹಾಜರಿರುತ್ತಾರೆಂದು ನಮಗೆ ತಿಳಿಸಿದ್ದಾರೆ" ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಕಾರ್ತಿಕ್ ಕಶ್ಯಪ್ ತಿಳಿಸಿದ್ದಾರೆ.

ಗೋವಾದ ಕ್ಯಾಂಡೊಲಿಮ್ ನ ಫ್ಯಾಬ್ ಇಂಡಿಯಾ ಬಟ್ಟೆಯಂಗಡಿಯ ಟ್ರಯಲ್ ರೂಮಿನ ದೃಶ್ಯಗಳನ್ನು ಸೆರೆ ಹಿಡಿಯುವಂತೆ ತಿರುಗಿಸಿದ್ದ ಸಿಸಿಟಿವಿ ಕ್ಯಾಮರಾವನ್ನು ಪತ್ತೆ ಹಚ್ಚಿ ಗೋವಾ ಪೊಲೀಸರಿಗೆ ಕಳೆದ ವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಗೋವಾ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಆದರೆ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು. 

SCROLL FOR NEXT