ಕಾಶ್ಮೀರಿ ಪ್ರತ್ಯೇಕವಾದಿಗಳು 
ಪ್ರಧಾನ ಸುದ್ದಿ

ಭಾರತದ ಮೇಲೆ ವಾಗ್ದಾಳಿ ನಡೆಸುತ್ತ, ತೆರಿಗೆ ಹಣದಲ್ಲಿ ರಾಜವೈಭವದಲ್ಲಿ ಬದುಕುವ ಪ್ರತೇಕವಾದಿಗಳು

"ನನ್ನ ಮುಂದೆ ಭಾರತ ಮತ್ತು ಪಾಕಿಸ್ತಾನದ ಎರಡು ದಬ್ಬಿಗಳನ್ನು ಇಟ್ಟರೆ ನಾನು ಪಾಕಿಸ್ತಾನಕ್ಕೆ ಮತ ಹಾಕುತ್ತೇನೆ" ಎಂದು ೨೦೦೮ರಲ್ಲಿ ಪ್ರತ್ಯೇಕವಾದಿ

ನವದೆಹಲಿ/ಶ್ರೀನಗರ: "ನನ್ನ ಮುಂದೆ ಭಾರತ ಮತ್ತು ಪಾಕಿಸ್ತಾನದ ಎರಡು ದಬ್ಬಿಗಳನ್ನು ಇಟ್ಟರೆ ನಾನು ಪಾಕಿಸ್ತಾನಕ್ಕೆ ಮತ ಹಾಕುತ್ತೇನೆ" ಎಂದು ೨೦೦೮ರಲ್ಲಿ ಪ್ರತ್ಯೇಕವಾದಿ ನಾಯಕ ಪ್ರೊ. ಅಬ್ದುಲ್ ಗನಿ ಭಟ್ ಮಾಧ್ಯಮಗಳಿಗೆ ಹೇಳಿದ್ದರು. ಅವರು ಪಾಕಿಸ್ತಾನದ ಕಟ್ಟಾ ಬೆಂಬಲಿಂಗ ಎಂದು ಕೂಡ ಹೇಳಿದ್ದರು. ಅವರೊಬ್ಬರೇ ಅಲ್ಲ. ಪಾಕಿಸ್ತಾನಿ ಪರ ಪ್ರತ್ಯೇಕವಾದಿಗಳಾದ ಹಶಿಮ್ ಖುರೇಷಿ ಅವರೂ ಕೂಡ ಇದೇ ಸಿದ್ಧಾಂತವನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ. ವಿಪರ್ಯಾಸ ಎಂದರೆ, ಸಾರ್ವಜನಿಕ ಭಾವನೆಗಳೊಂದಿಗೆ ಚೆಲ್ಲಾಟ ಆಡುವ, ಸರ್ಕಾರದ ಆದೇಶವನ್ನು ಧಿಕ್ಕರಿಸುವ ಇವರು ಜನರ ತೆರಿಗೆ ಹಣದಿಂದ ರಾಜ ವೈಭವದಿಂದ ಬದುಕುವುದರಿಂದ ಹಿಂದೆ ಬೀಳುವುದಿಲ್ಲ.

ಈ 'ರಾಜಕೀಯ ಕಾರ್ಯಕರ್ತರು' ರಾಜ್ಯ ಸರ್ಕಾರದಿಂದ ಭದ್ರತೆ, ಮನೆಯಲ್ಲಿ ಭದ್ರತಾ ಸಿಬ್ಬಂದಿ, ಓಡಾಡಲು ಕಾರುಗಳು, ಅದಕ್ಕೆ ಇಂಧನ ಹಾಗೂ ಹೋಟೆಲ್ಗಳಲ್ಲಿ ಸುರಕ್ಷಿತ ವಸತಿ ಹೀಗೆ ಹತ್ತು ಹಲವಾರು ಉಚಿತ ಸೌಲಭ್ಯಗಳನ್ನು ಪಡೆದಿದ್ದಾರೆ.

ಸರ್ಕಾರ ಈ ಭಾರತ ವಿರೋಧಿ ರಾಜಕೀಯ ಕಾರ್ಯಕರ್ತರ ಭದ್ರತಾ ಸಿಬ್ಬಂದಿಗಳ ವೇತನ ಭತ್ಯೆಗೆ ೬೯ಕೋಟಿ ವ್ಯಯಿಸಿದೆ. ಹಾಗೂ ಅವರ ವೈಯಕ್ತಿಕ ಭದ್ರತಾ ಪಡೆಗಳಿಗೆ ೪೦ ಕೋಟಿ ವ್ಯಯಿಸಿದೆ. ಹೋಟೆಲ್ ವಸತಿಗೆ ೩.೬ ಕೋಟಿ, ಇಂಧನಕ್ಕೆ ೫.೧೮ಕೋಟಿ ಖರ್ಚು ಮಾಡಿದೆ. ೨೦೧೩-೧೪ ರಲ್ಲಿ ಕಾಶ್ಮೀರ ಕಣಿವೆಯ ಈ ಪ್ರತ್ಯೇಕವಾದಿಗಳ ಮೇಲೆ ಸರ್ಕಾರ ೧೦೭ ಕೋಟಿ ಖರ್ಚು ಮಾಡಿತ್ತು.

ಬಿಜೆಪಿ ಶಾಸಕ ರಾಜೇಶ್ ಗುಪ್ತಾ ಕಳೆದ ವಾರ ರಾಜಕೀಯ ಕಾರ್ಯಕರ್ತರ ಸಂಖ್ಯೆ ಹಾಗು ಅವರ ಮೇಲೆ ಒಮರ್ ಅಬ್ದುಲ್ಲ ಸರ್ಕಾರ ವ್ಯಯಿಸಿದ ಹಣದ ವಿವರ ಕೇಳಿದ್ದರು. ಜಮ್ಮು ಪೂರ್ವ ಕ್ಷೇತ್ರದ ಈ ಶಾಸಕ ಆ ದೊಡ್ದ ಹಣದ ಮೊತ್ತವನ್ನು ನೋಡಿ ಆಘಾತವಾಯಿತು ಎಂದು ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ಇತ್ತೀಚೆಗೆ ಹುರಿಯತ್ ಕಾನ್ಫರೆನ್ಸ್ ನ ಸೌಮ್ಯವಾದಿ ಬಳಗದ ಅಧ್ಯಕ್ಷ ಮೀರ್ವೈಜ್ ಉಮರ್ ಫರೂಕ್ ಅವರು ಏಳು ಜನರ ತಂಡದೊಂದಿಗೆ ಪಾಕಿಸ್ತಾನಿ ರಾಯಭಾರಿಯನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಪಾಕಿಸ್ತಾನ ರಾಷ್ಟ್ರೀಯ ದಿವಸವಾದ ಅಂದು ಇವರನ್ನು ಜಮ್ಮು ಕಾಶ್ಮೀರ ಸರ್ಕಾರದ ಭದ್ರತಾ ವಾಹನಗಳಲ್ಲಿ ಸುರಕ್ಷಿತವಾಗಿ ಕೊಂಡೊಯ್ಯಲಾಗಿತ್ತು.

ರಾಜ್ಯದಲ್ಲಿ ಚುನಾವಣೆಗಳ ವಿರುದ್ಧ ಆದೇಶ ಹೊರಡಿಸುವ ನಾಯಕರಲ್ಲಿ ಮೀರ್ವೇಜ್ ಕೂಡ ಒಬ್ಬರು. ಜಮ್ಮು ಕಾಶ್ಮೀರ ಪೊಲೀಸರು ರಕ್ಷಣೆ ನೀಡುವ ೧೪೭೨ ಪ್ರತ್ಯೇಕವಾದಿ ನಾಯಕರಲ್ಲಿ ಇವರೂ ಕೂಡ ಇದ್ದಾರೆ. 2014-೧೫ ರಲ್ಲಿ ಸರ್ಕಾರ ಇವರುಗಳ ಮೇಲೆ ವ್ಯಯಿಸಿದ ೧೨೦ ಕೋಟಿ, ವಿಧವೆಯರು ಮತ್ತು ಬಡ ಮಹಿಳೆಯ ಸಬಲೀಕರಣಕ್ಕೆ ಸರ್ಕಾರ ಬಜೆಟ್ ನಲ್ಲಿ ಮೀಸಲಿಟ್ಟ ೧೦೦ ಕೋಟಿಗಿಂತಲೂ ಹೆಚ್ಚು ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಹಾಗು ಹೊಸ ಅಂಗನವಾಡಿ ಕೇಂದ್ರಗಳ ಸ್ಥಾಪನೆಗಾಗಿ ಮೀಸಲಿಟ್ಟ ೪೦ ಕೋಟಿ ಗಳಿಗೆ ಮೂರು ಪಟ್ಟು ಹೆಚ್ಚು ಹಣವನ್ನು ಪ್ರತ್ಯೇಕವಾದಿಗಳ ಮೇಲೆ ಸರ್ಕಾರ ಖರ್ಚು ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT