ನವದೆಹಲಿ: ಪಕ್ಷದ ಕಾರ್ಯಕರ್ತರಿಗೆ ರಾಜ್ಯ ಚಿಹ್ನೆಯನ್ನು ಒಳಗೊಂಡ ಗುರುತಿನ ಚೀಟಿಗಳನ್ನು ವಿತರಿಸಿದ ಆರೋಪದ ಮೇಲೆ ದೆಹಲಿ ಹೈಕೋರ್ಟ್ ಆಮ್ ಆದ್ಮಿ ಪಕ್ಷ ಮತ್ತು ಅದರ ಶಾಸಕ ರಿತುರಾಜ್ ಗೋವಿಂದ್ ಅವರಿಗೆ ಬುಧವಾರ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಚಿಹ್ನೆಯನ್ನು ಒಳಗೊಂಡ ಗುರುತಿನ ಚೀಟಿಗಳನ್ನು ಪಕ್ಷದ ಕಾರ್ಯಕರ್ತರಿಗೆ ವಿತರಿಸದಂತೆ ಕೂಡ ನ್ಯಾಯಾಧೀಶ ರಾಜೀವ್ ಶಾಕೆದಾರ್ ಪಕ್ಷಕ್ಕೆ ಹಾಗು ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ.
ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ, ಎಎಪಿ, ದೆಹಲಿ ಪೊಲೀಸ್ ಮಹಾನಿರ್ದೇಶಕ ಹಾಗು ಗೋವಿಂದ್ ಅವರಿಂದ ಸ್ಪಷ್ಟನೆ ಕೇಳಿದ್ದಾರೆ.