ಪ್ರಧಾನ ಸುದ್ದಿ

ಅಮೇರಿಕಾ ಗ್ಯಾಸ್ ಸ್ಟೇಶನ್ ನಲ್ಲಿ ಭಾರತೀಯನನ್ನು ಕೊಂದ ದರೋಡೆಕೋರಾರು

Guruprasad Narayana

ನ್ಯೂಯಾರ್ಕ್: ಅಮೇರಿಕಾದ ಕನ್ನೆಕ್ಟಿಕಟ್ ರಾಜ್ಯದಲ್ಲಿ ದರೋಡೆ ಪ್ರಯತ್ನವೊಂದರಲ್ಲಿ, ಗ್ಯಾಸ್ ಸ್ಟೇಶನ್ ನಲ್ಲಿ ಕೆಲಸ ಮಾಡುತ್ತಿದ್ದ ೩೯ ವರ್ಷದ ಭಾರತೀಯನನ್ನು ಇಬ್ಬರು ಮುಖವಾಡ ಧರಿಸಿದ ದರೋಡೆಕಾರರು ಗುಂಡಿಕ್ಕಿ ಕೊಂದಿದ್ದಾರೆ.

ನ್ಯೂ ಹ್ಯಾವೆನ್ ನ ಗ್ಯಾಸ್ ಸ್ಟೇಶನ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಸಂಜಯ್ ಪಟೇಲ್ ಅವರಿಗೆ ಎದೆಗೆ ಹಾಗು ಕೈಗೆ ನಾಲ್ಕು ಗುಂಡು ಹೊಡೆದು ಇಬ್ಬರು ಮುಸುಕುಧಾರಿಗಳು ಸೋಮವಾರ ರಾತ್ರಿ ಕೊಂದಿದ್ದಾರೆ. ಯೇಲ್-ನ್ಯೂ ಹ್ಯಾವೆನ್ ಆಸ್ಪತ್ರೆಗೆ ಸಂಜಯ್ ಅವರನ್ನು ಕೊಂಡೊಯ್ದರು ಒಂದು ಘಂಟೆಯ ನಂತರ ಅವರು ಮೃತಪಟ್ಟಿದ್ದಾರೆ.

ಇಬ್ಬರು ಮುಸುಕುಧಾರಿಗಳಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿರುವ ಪೊಲೀಸರು ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ. ಪಟೇಲ್ ಅವರು ತಮ್ಮ ಪತ್ನಿ ಮತ್ತು ಒಂದು ಮಗುವನ್ನು ಅಗಲಿದ್ದಾರೆ. ಅವರ ಪತ್ನಿ ಈಗ ಗರ್ಭಿಣಿ ಕೂಡ.

"ಎರಡು ನೂರು ಡಾಲರ್ಗಳಿಗಾಗಿ ದರೋಡೆಕಾರರು ಪಟೇಲ್ ಅವರ ಜೀವ ತೆಗೆದಿದ್ದಾರೆ. ಇದು ಸರಿಯಲ್ಲ" ಎಂದು ಗ್ಯಾಸ್ ಸ್ಟೇಶನ್ ಮಾಲೀಕ ರಾಜ್ ಅಲಿ ತಿಳಿಸಿದ್ದಾರೆ. ಇಬ್ಬರು ಮುಸುಕುಧಾರಿಗಳು ಅಲ್ಲಿಂದ ಓಡುತ್ತಿದ್ದುದ್ದನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

"ಇಬ್ಬರೂ ಗುಂಡು ಹಾರಿಸಿದರೆ ಎಂಬುದರ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ. ಒಬ್ಬನಂತು ಹಾರಿಸಿದ್ದಾನೆ" ಎಂದಿರುವ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT