ಒಟ್ಟಾವಾ (ಕೆನಡಾ): ಪ್ರಧಾನಿ ನರೇಂದ್ರ ಮೋದಿಯವರ ರಾಜದೌತ್ಯವೇ ಅಂಥದ್ದು. ಬರೋಬ್ಬರಿ 42 ವರ್ಷಗಳ ಬಳಿಕ ಉತ್ತರ ಅಮೆರಿಕ ರಾಷ್ಟ್ರ ಕೆನಡಾಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿ ದೇಶಕ್ಕೆ ಅಗತ್ಯ ಇರುವ ಯುರೇನಿಯಂ ಅನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲಿನ ಪ್ರಧಾನಿ ಸ್ಟೀಫನ್ ಹಾರ್ಪರ್ ಜತೆಗಿನ ಮಾತುಕತೆ ವೇಳೆ ಮುಂದಿನ ಐದು ವರ್ಷಗಳ ಕಾಲ 3 ಸಾವಿರ ಮೆಟ್ರಿಕ್ ಟನ್ ಗಳಷ್ಟು ಯುರೇನಿಯಂ ದೇಶಕ್ಕೆ ಪೂರೈಕೆಯಾಗಲಿದೆ. ಹೀಗಾಗಿ, ವಿದ್ಯುತ್ ಉತ್ಪಾದನೆ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ನೆರವಾಗಲಿದೆ. ರಷ್ಯಾ, ಕಝಕಿಸ್ತಾನ ನಿರೀಕ್ಷಿತ ಯುರೇನಿಯಂ ಪೂರೈಕೆ ಮಾಡುವುದಾಗಿ ಒಪ್ಪಿಕೊಂಡಿವೆ. ಇಷ್ಟು ಮಾತ್ರವಲ್ಲದೆ ಎರಡು ದೇಶಗಳ ಜತಗೆ 13 ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿಷೇಧ ಹೇರಲಾಗಿತ್ತು.
ಮೊದಲ ಪರ ಮಾಣು ಪರೀಕ್ಷೆ ನಡೆಸುವುದಕ್ಕಿಂತ ಮೊದಲೇ (1974) ಈ ಕ್ಷೇತ್ರದ ಯಾವುದೇ ತಂತ್ರಜ್ಞಾನ ಭಾರತಕ್ಕೆ ವರ್ಗಾವಣೆ ಮಾಡುವುದನ್ನು ನಿಷೇಧಿಸಿತ್ತು. ಆದರೆ 2013ರಲ್ಲಿ ಪರಮಾಣು ಒಪ್ಪಂದಕ್ಕೆ 2 ದೇಶಗಳು ಸಹಿ ಹಾಕಿದ್ದವು. ಜರ್ಮನಿ ಮತ್ತು ಫ್ರಾನ್ಸ್ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಳಿಸಿರುವ ಪ್ರಧಾನಿ ಕೊನೆಯ ಹಂತದಲ್ಲಿ ಕೆನಡಾ ಪ್ರವಾಸ ಕೈಗೊಂಡಿದ್ದಾರೆ.
ಮುಂದಿನ 2 ದಿನಗಳ ಕಾಲ ಕೆನಡಾದ ಟೊರಾಂಟೋ ಮತ್ತು ವಾಂಕೂವರ್‍ಗೆ ಭೇಟಿ ನೀಡಲಿದ್ದಾರೆ. ಟೊರಾಂಟೋದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಹೇಳಿದ್ದೇನು?
. ಕೆನಡದ ಪ್ರವಾಸಿಗರಿಗೆ 10 ವರ್ಷಗಳ ವೀಸಾ ನೀಡುವುದಕ್ಕೆ ಕ್ರಮ.
.ಉಗ್ರವಾದ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ಒಪ್ಪಿಕೊಂಡಿದ್ದೇವೆ.
.ಈ ಸೆಪ್ಟೆಂಬರ್‍ನಲ್ಲಿ 2 ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಬಂಡವಾಳ ಹೂಡಿಕೆಗೆ ಸಹಿ.
.ಭಾರತ ಬದಲಾಗುತ್ತಿದೆ, ಅಂತೆಯೇ ನಮ್ಮದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ.
.ಭಾರತವನ್ನು ಉತ್ಪಾದನಾ ವಲಯದ ಹಬ್ ಮಾಡಲಿದ್ದೇವೆ, ನೀವೂ ಹೂಡಿಕೆ ಮಾಡಿ.
ಹಾರ್ಪರ್ ಹೇಳಿದ್ದೇನು?
.ಪ್ರಧಾನಿ ಮೋದಿ ಭೇಟಿ ಎರಡು ರಾಷ್ಟ್ರಗಳ ನಡುವಿನ ಗಾಢ ಬಾಂಧವ್ಯ ಸೂಚಿಸುತ್ತದೆ.
.ಭಾರತೀಯ ಸಮುದಾಯ ಸಂಸ್ಕೃತಿ, ಸಿನಿಮಾಗಳನ್ನು ಇಲ್ಲಿಗೆ ನೀಡಿದೆ.
.ಇತ್ತೀಚಿನ ವರೆಗೆ 2 ರಾಷ್ಟ್ರಗಳ ಸಂಬಂಧದ ಉತ್ತಮವಾಗಿರಲಿಲ್ಲ. ಆದರೆ ಈಗ ಎಲ್ಲ ಮರೆತು ಮುಂದೆ ಸಾಗುವ ಸಮಯ.