ಆಗ್ರಾ: ಉತ್ತರಪ್ರದೇಶದ ಆಗ್ರಾ ಕಂಟೋನ್ಮೆಂಟ್ ನ ಚರ್ಚೊಂದರ ಮೇಲೆ ದಾಳಿ ಮಾಡಿ ಆಸ್ತಿ ಪಾಸ್ತಿ ನಾಶ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಮೆಜೆಸ್ಟ್ರೇಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಸೇಂಟ್ ಮೇರಿ ಚರ್ಚ್ ಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಚರ್ಚ್ ನ ಪಾದ್ರಿಯವರ ಪ್ರಕಾರ ಗಾಜಿನ ಡಬ್ಬಿಯಲಿದ್ದ ಎರಡು ಮೂರ್ತಿಗಳನ್ನು ಧ್ವಂಸ ಮಾಡಿರುವುದಲ್ಲದೆ, ಚರ್ಚ್ ನ ಮುಂಬಾಗಿಲಿನ ಬೀಗ ಒಡೆದುಹಾಕಿದ್ದಾರೆ. ಭಿತ್ತಿ ಫಲಕ ಹಾಗು ಚರ್ಚ್ ಬಳಿ ನಿಲ್ಲಿಸಲಾಗಿದ್ದ ಕಾರಿಗೂ ಹಾನಿಯಾಗಿದೆ.
ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ ಹಾಗೂ ಆಗ್ರಾದ ಕ್ರಿಶ್ಚಿಯನ್ ಮುಖಂಡರು ಈ ಘಟನೆಯನ್ನು ಖಂಡಿಸಿದ್ದಾರೆ.