ಪ್ರಧಾನ ಸುದ್ದಿ

ದಲೈಲಾಮ ನೀತಿ ಚೈನಾ ಒಡೆಯಲು ಪ್ರಯತ್ನ:ಶ್ವೇತ ಪತ್ರ

Guruprasad Narayana

ಧರ್ಮಶಾಲಾ: ಟಿಬೆಟ್ ಮೇಲೆ ಶ್ವೇತ ಪತ್ರ ಹೊರಡಿಸಿರುವ ಚೈನಾ ಸರ್ಕಾರ, ಅಜ್ಞಾತವಾಸದಲ್ಲಿರುವ ಅಧ್ಯಾತ್ಮ ಗುರು ದಲೈಲಾಮ ಅವರ 'ಮಧ್ಯಮ ಮಾರ್ಗ ನೀತಿ' ಚೈನಾವನ್ನು ಒಡೆಯುವ ಪ್ರಯತ್ನ ಎಂದಿದೆ.

ಟಿಬೆಟಿಯನ್ ಕೇಂದ್ರ ಆಡಳಿತ ಟಿಬೆಟ್ ಪರವಾಗಿದ್ದು "ಚೈನಾದ ಸಂವಿಧಾನದ ಒಳಗೆ ನಿಜ ಸ್ವಾಯತ್ತತತೆಗೆ ಅದು ಬೇಡಿಕೆ ಇಟ್ಟಿದೆ" ಎಂದು ಚೈನಾ ಮತ್ತೆ ಹೇಳಿದೆ.

"ಕಳೆದ ಕೆಲವು ವರ್ಷಗಳಿಂದ ಹಿಂಸಾಚಾರಕ್ಕೆ ಒತ್ತು ನೀಡಿ ವಿಫಲವಾದ ಮೇಲೆ ಈಗ ಮಧ್ಯಮ ಮಾರ್ಗಕ್ಕೆ ಬೇಡಿಕೆಯಿಡುತ್ತಿದ್ದಾರೆ" ಎಂದು ಚೈನಾ ಸರ್ಕಾರ ಬುಧವಾರ ತಿಳಿಸಿದೆ.

ಚೈನಾದ ಪ್ರದೇಶದಲ್ಲಿ ಈ ಮಧ್ಯಮ ಮಾರ್ಗ, ದೇಶದಲ್ಲಿ ಮತ್ತೊಂದು ದೇಶವನ್ನು ಸೃಷ್ಟಿಸಿವ ತಂತ್ರ. ಮತ್ತು ಅದನ್ನು ದಲೈಲಾಮ ಬೆಂಬಲಿಗರು ಆಡಳಿತ ನಡೆಸಿ ಕೊನೆಗೆ ಅದನ್ನು ಸ್ವತಂತ್ರಗೊಳಿಸಬೇಕೆಂದಿದ್ದಾರೆ.

"ಪ್ರಾಚೀನ ಕಾಲದಿಂದಲೂ ಟಿಬೆಟ್ ಚೈನಾದ ಪ್ರದೇಶದಲ್ಲೇ ಉಳಿದಿರುವ ಪ್ರದೇಶ. ಚೈನಾ ದೇಶದ ಪ್ರಜೆಗಳೇ ಟಿಬೆಟ್ಟಿಯನ್ನರು" ಎಂದಿದೆ ಶ್ವೇತ ಪತ್ರ.

1959 ರಿಂದಲೂ ದಲೈಲಾಮ ಅಜ್ಞಾತವಾಸದಲ್ಲಿ ಬದುಕಿದ್ದು, ಉತ್ತರ ಭಾರತದ ಬೆಟ್ಟದಲ್ಲಿ ಟಿಬೆಟಿಯನ್ ಅಜ್ಞಾತವಾಸದ ಆಡಳಿತ ಇದೆ.

SCROLL FOR NEXT