ಕ್ಷಿಪಣಿ ಪರೀಕ್ಷೆ 
ಪ್ರಧಾನ ಸುದ್ದಿ

೩೦೦೦ ಕಿಮೀ ರೇಂಜ್ ಅಣು ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

೩೦೦೦ ಕಿಮೀ ರೇಂಜಿನ ಪರಮಾಣು ಸಕ್ರಿಯ ಅಗ್ನಿ-೩ ಬ್ಯಾಲ್ಲಿಸ್ಟಿಕ್ ಕ್ಷಿಪಣಿಯನ್ನು ಒರಿಸ್ಸಾದಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ

ಭುವನೇಶ್ವರ್: ೩೦೦೦ ಕಿಮೀ ರೇಂಜಿನ ಪರಮಾಣು ಸಕ್ರಿಯ ಅಗ್ನಿ-೩ ಬ್ಯಾಲ್ಲಿಸ್ಟಿಕ್ ಕ್ಷಿಪಣಿಯನ್ನು ಒರಿಸ್ಸಾದಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆಲದಿಂದ ನೆಲಕ್ಕೆ ಜಿಗಿಯುವ ಈ ಕ್ಷಿಪಣಿಯನ್ನು ಭಡ್ರಕ್ ಜಿಲ್ಲೆಯ ಧಮ್ರಾದ ದ್ವೀಪದಿಂದ ಉಡಾಯಿಸಿ ಪರೀಕ್ಷಿಸಲಾಗಿದೆ.

"ಇದು ಬಳಕೆದಾರರ ಪರೀಕ್ಷೆ. ಯಶಸ್ವಿಯಾಗಿದೆ" ಎಂದು ಪರೀಕ್ಷೆ ಯೋಜನೆಯ ನಿರ್ದೇಶಕ ಎಂ ವಿ ಕೆ ವಿ ಪ್ರಸಾದ್ ತಿಳಿಸಿದ್ದಾರೆ.

೧.೫ ಟನ್ ತೂಕದವರೆಗೂ ಯುದ್ಧ ಅಣು ಶಸ್ತ್ರಾಸ್ತ್ರಗಳನ್ನು ಒಯ್ಯುವ ಸಾಮರ್ಥ್ಯ ಪಡೆದಿದೆ ಅಗ್ನಿ-೩ ಬ್ಯಾಲ್ಲಿಸ್ಟಿಕ್ ಕ್ಷಿಪಣಿ. ಇದು ೧೬ ಮೀಟರ್ ಉದ್ದವಿದ್ದು ೪೮ ಟನ್ ತೂಕವಿದೆ. ಎರಡು ಹಂತದ ಘನ ಉಡಾಯಣಾ ತಂತ್ರಜ್ಞಾನ ಹೊಂದಿದ್ದು ಅತಿ ವೇಗವಾಗಿ ವಾಯುಮಂದಲಕ್ಕೆ ಚಿಮ್ಮಬಹುದಾಗಿದೆ.

ಭಾರತದಲ್ಲಿ ಯಾವುದೇ ಪ್ರದೇಶದಿಂದ ಉಡಾಯಿಸಲಬಲ್ಲ ಮೊಬೈಲ್ ತಂತ್ರಜ್ಞಾನವನ್ನು ಅಗ್ನಿ-೩ ಕ್ಷಿಪಣಿ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!