ಜಮ್ಮು: ಜಮ್ಮುವಿನ ಹಳೆ ಜಾನಿಪೋರ ಪ್ರದೇಶದಲ್ಲಿ ಎರಡು ದ್ವಿಚಕ್ರ ವಾಹನಗಳು ಢಿಕ್ಕಿ ಹೊಡೆದು, ಅದರಲ್ಲಿ ಒಬ್ಬ ೨೭ ವರ್ಷದ ದ್ವಿಚಕ್ರ ಸವಾರನಿಗೆ ಮನಬಂದಂತೆ ಥಳಿಸಿದ್ದರಿಂದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಸಂಜೆ ರಾಕೇಶ್ ಕುಮಾರ್ ಎಂಬ ಯುವಕನಿಗೆ ಕನಿಷ್ಠ ಮೂರು ಜನ ಸಾಯುವವರೆಗೂ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆಯ ಜಾನಿಪೋರಾ ಪ್ರದೇಶದ ನಿವಾಸಿ ಸಂತ್ರಸ್ತ ರಾಕೇಶ್ ತನ್ನ ತಮ್ಮನ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಮೂರು ಜನರು ಕುಳಿತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಾಗ ಈ ಗಲಾಟೆ ಪ್ರಾರಂಭವಾಗಿದೆ.
ದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಪಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿರುವ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.