ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ 
ಪ್ರಧಾನ ಸುದ್ದಿ

'ಗೋಡ್ಸೆ' ಇನ್ನುಮುಂದೆ ಅಸಂಸದೀಯ ಪದವಲ್ಲ

'ಗೋಡ್ಸೆ' ಪದ ಇನ್ನುಮುಂದೆ ಅಸಂಸದೀಯ ಪದವಾಗಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ತೀರ್ಪು

ನವದೆಹಲಿ: 'ಗೋಡ್ಸೆ' ಪದ ಇನ್ನುಮುಂದೆ ಅಸಂಸದೀಯ ಪದವಾಗಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ತೀರ್ಪು ನೀಡಿದ್ದಾರೆ. ನಾಥುರಾಮ್ ಗೋಡ್ಸೆ ಅರ್ಥದಲ್ಲಿ ಬಳಸಿದಾಗಷ್ಟೆ ಈ ಪದ ಅಸಂಸದೀಯವಾಗಲಿದೆ ಎಂದಿದ್ದಾರೆ.

'ಗೋಡ್ಸೆ' ಪದವನ್ನು ಅಸಂಸದೀಯ ಪದಗಳ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಧ್ವನಿ ಎತ್ತಿದ್ದ ನಾಸಿಕ್ ನ ಶಿವಸೇನಾ ಲೋಕಸಭಾ ಸದಸ್ಯ ಹೇಮಂತ್ ತುಕಾರಾಂ ಗೋಡ್ಸೆ ಅವರಿಗೆ ಗುರುವಾರದ ಈ ಆದೇಶ ನಿರಾಳ ತಂದಿದೆ.

ಈ ಹಿಂದೆ ಸಂಸತ್ತಿನ ಎರಡೂ ಮನೆಗಳಿಗೆ ಪತ್ರ ಬರೆದಿದ್ದ ಅವರು ಲೋಕಸಭಾ ಸದಸ್ಯನ ಕೊನೆಯ ಹೆಸರು ಅಸಂಸದೀಯ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದರು.

ನನ್ನ ಕೊನೆಯ ಹೆಸರು ಗೋಡ್ಸೆ ಎಂದಿರುವುದು ನನ್ನ ತಪ್ಪಲ್ಲ ಹಾಗು ನನ್ನ ಪೂರ್ವಜರ ಮನೆತನದ ಹೆಸರನ್ನು ನಾನು ಬದಲಾಯಿಸಿಕೊಳ್ಳುವುದಿಲ್ಲ ಎಂದಿದ್ದ ಅವರು ಗೋಡ್ಸೆ ಪದವನ್ನು ಅಸಂಸದೀಯ ಪದಗಳ ಪಟ್ಟಿಯಿಂದ ತೆಗೆದುಹಾಕಲು ಮನವಿ ಮಾಡಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ೧೯೪೮ ರಲ್ಲಿ ನಾಥುರಾಮ್ ಗೋಡ್ಸೆ ಗುಂಡು ಹೊಡೆದು ಕೊಂಡಿದ್ದ. ೧೯೫೬ರಿಂದ ಗೋಡ್ಸೆ ಪದದ ಬಳಕೆಯನ್ನು ಅಸಂಸದೀಯ ಎಂದು ಪರಿಗಣಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT