ಟೋಕಿಯೋ: ಕ್ಯಾಮರಾ ಒಳಗೊಂಡ ಡ್ರೋನ್ ಒಂದು ಜಪಾನಿ ಪ್ರಧಾನಿ ಶಿಜ್ನೋ ಅಬೆ ಅವರ ನಿವಾಸದ ಮೇಲೆ ಪತ್ತೆ ಹಚ್ಚಲಾಗಿದೆ. ಇದರ ಮೂಲ ಮತ್ತು ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಟೋಕಿಯೋ ಪೊಲೀಸರು ತಿಳಿಸಿದ್ದಾರೆ.
೫೦ ಸೆಂಟಿ ಮೀಟರ್ ರೆಕ್ಕೆ ಇದ್ದ ಈ ಡ್ರೋನ್ ಟೋಕಿಯೋದ ಚಿಯೋಡಾ ಜಿಲ್ಲೆಯ ಪ್ರಧಾನ ಮಂತ್ರಿ ಅವರ ನಿವಾಸ ಕಾಂಟೈ ಮೇಲೆ ಬಿದ್ದಿದೆ, ನಂತರ ಭದ್ರತಾ ಸಿಬ್ಬಂದಿ ಇದನ್ನು ಪತ್ತೆ ಹಚ್ಚಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಏಶಿಯಾ-ಆಫ್ರಿಕಾ ಸಮಾವೇಶದಲ್ಲಿ ಭಾಗವಹಿಸಲು ಅಬೆ ಸದ್ಯಕ್ಕೆ ಜಕಾರ್ತಾದಲ್ಲಿದ್ದಾರೆ.
ಅಧಿಕಾರಿಗಳು ಡ್ರೋನ್ ಪರೀಕ್ಷಿಸಿದ್ದು, ಅದರಲ್ಲಿ ಯಾವುದೇ ಸ್ಪೋಟ ಸಾಮಗ್ರಿಗಳಿರಲಿಲ್ಲ ಎಂದು ತಿಳಿಸಿದ್ದಾರೆ.
ಇಂತಹುದೇ ಘಟನೆಯಲ್ಲಿ ಜನವರಿಯಲ್ಲಿ ಡ್ರೋನ್ ಒಂದು ವಾಶಿಂಗ್ಟನ್ನಿನ ಶ್ವೇತ ಭವನದ ಹುಲ್ಲುಗಾವಲಿನಲ್ಲಿ ಬಿದ್ದಿತ್ತು.
ಫ್ರಾನ್ಸ್ ನ ಅಣುಶಕ್ತಿ ಕೇಂದ್ರಗಳು, ಸೇನಾ ಪಡೆಗಳ ಜಾಗಗಳಲ್ಲಿ, ರಾಯಭಾರ ಕಚೇರಿಗಳ ಪ್ರದೇಶಗಳಲ್ಲಿ ಅನಧಿಕೃತವಾಗಿ ೬೦ ಡ್ರೋನ್ ಗಳು ಎತ್ತರದಲ್ಲಿ ಹಾರಾಡುತ್ತಿದ್ದನ್ನು ಅಧಿಕಾರಿಗಳು ಧೃಢೀಕರಿಸಿದ್ದರು.