ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಬಾಳೆಹಣ್ಣು ಹೊತ್ತ ೧೩ ಟ್ರಕ್ಕುಗಳನ್ನು ಹಿಂದಕ್ಕೆ ಕಳುಹಿಸಿದ ಪಾಕಿಸ್ತಾನಿಗಳು

ಭಾರತೀಯ ವ್ಯಾಪಾರಸ್ಥರ ನಡುವಿನ ಭಿನ್ನಾಭಿಪ್ರಾಯಗಳಿಂದ ಬಾಳೆಹಣ್ಣು ಹೊತ್ತ ೧೩ ಟ್ರಕ್ಕುಗಳನ್ನು ಬುಧವಾರ ಪಾಕಿಸ್ತಾನಿ ಮಾರಾಟಗಾರರು

ಜಮ್ಮು: ಭಾರತೀಯ ವ್ಯಾಪಾರಸ್ಥರ ನಡುವಿನ ಭಿನ್ನಾಭಿಪ್ರಾಯಗಳಿಂದ ಬಾಳೆಹಣ್ಣು ಹೊತ್ತ ೧೩ ಟ್ರಕ್ಕುಗಳನ್ನು ಬುಧವಾರ ಪಾಕಿಸ್ತಾನಿ ಮಾರಾಟಗಾರರು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಭಜನೆಯಾಗಿರುವ ಕಾಶ್ಮೀರದ ನಡುವಿನ ವ್ಯಾಪಾರದ ಸಲುವಾಗಿ ಮಂಗಳವಾರ ಈ ಟ್ರಕುಗಳು ಪಾಕಿಸ್ತಾನ ಪ್ರವೇಶಿಸಿದ್ದವು.

ಎರಡು ಕಡೆಯ ಅಧಿಕಾರಿಗಳು ಪೂಂಚ್ ನ ಚಕನ್ ದ ಭಾಗ್ ನಲ್ಲಿ ಭೇಟಿ ಮಾಡಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಾಗಿ ಭಾರತೀಯ ಅಧಿಕಾರಿ ಮುಹಮ್ಮದ್ ಆಶ್ರಫ್ ಚೌಧರಿ ತಿಳಿಸಿದ್ದಾರೆ.

ದುಡ್ಡು ಕೊಡುವುದರ ತೆಗೆದುಕೊಳ್ಳುವುದರ ಬಗ್ಗೆ ಕೆಲವು ವಿವಾದಗಳಿದ್ದವು, ಆದರೆ ಪಾಕಿಸ್ತಾನಿ ವ್ಯಾಪಾರಿಗಳು ಟ್ರಕ್ಕುಗಳನ್ನು ವಾಪಸ್ ಕಳುಹಿಸಬಾರದಿತ್ತು ಎಂದು ಭಾರತೀಯ ವ್ಯಾಪಾರಿಗಳು ಹೇಳಿದ್ದಾರೆ.

"ಚಕನ್ ದ ಭಾಗ್ ಗಡಿಯನ್ನು ನೆನ್ನೆ ೨೫ ಟ್ರಕ್ಕುಗಳು ದಾಟಿದ್ದವು" ಎಂದು ಚೌಧರಿ ತಿಳಿಸಿದ್ದಾರೆ. "ಇವುಗಳಲ್ಲಿ ೧೩ ರನ್ನು ವಾಪಸ್ ಕಳುಹಿಸಲಾಗಿದೆ, ಆದರೆ ಬಾದಾಮಿ, ಸೇಬುಗಳನ್ನೊಳಗೊಂಡ ೧೦ ಟ್ರಕ್ಕುಗಳು ಪಾಕಿಸ್ತಾನದಿಂದ ಭಾರತಕ್ಕೆ ಬಂದಿವೆ" ಎಂದು ಅವರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಗಡಿಯಲ್ಲಿ ಭಾರತ ಮಾತು ಪಾಕಿಸ್ತಾನದ ಮಧ್ಯೆ ನಂಬಿಕೆ ಬೆಳೆಸುವ ಉದ್ದೇಶದಿಂದ ೨೦೦೮ರಲ್ಲಿ ವ್ಯಾಪಾರ ಪ್ರಾರಂಭವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!