ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಫೋರ್ಡ್ ಫೌಂಡೇಶನ್ ಪ್ರಕರಣ: ಭಾರತದಿಂದ ಸ್ಪಷ್ಟೀಕರಣ ಕೇಳಿದ ಅಮೆರಿಕಾ

ಫೋರ್ಡ್ ಫೌಂಡೇಶನ್ ಮತ್ತು ಗ್ರೀನ್ ಪೀಸ್ ಸಂಸ್ಥೆಗಳ ಮೇಲೆ ನಿಷೇಧಕ್ಕೆ ಮುಂದಾಗಿರುವ ಭಾರತದ ನಡೆಯ ಬಗ್ಗೆ ಅಸಮಧಾನ

ವಾಶಿಂಗ್ಟನ್: ಫೋರ್ಡ್ ಫೌಂಡೇಶನ್ ಮತ್ತು ಗ್ರೀನ್ ಪೀಸ್ ಸಂಸ್ಥೆಗಳ ಮೇಲೆ ನಿಷೇಧಕ್ಕೆ ಮುಂದಾಗಿರುವ ಭಾರತದ ನಡೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಅಮೆರಿಕಾ ಈ ನಡೆಯ ಬಗ್ಗೆ ಭಾರತದಿಂದ ಸ್ಪಷ್ಟೀಕರಣ ಕೇಳಿದೆ.

"ಭಾರತದ ಗೃಹ ಸಚಿವಾಲಯ ಗ್ರೀನ್ ಪೀಸ್ ಸಂಸ್ಥೆಯ ನೊಂದಣಿಯನ್ನು ರದ್ದು ಮಾಡಿರುವುದು ಹಾಗೂ ಫೋರ್ಡ್ ಫೌಂಡೇಶನ್ ನನ್ನು ಕಣ್ಗಾವಲಿನಲ್ಲಿ ಇಟ್ಟಿರುವುದು ನಮಗೆ ತಿಳಿದಿದೆ" ಎಂದು ಅಮೆರಿಕಾ ಸರ್ಕಾರದ ಉಪ ವಕ್ತಾರ ಮಾರಿ ಹಾರ್ಫ್ ತಿಳಿಸಿದ್ದಾರೆ.

ಈ ಸ್ವಲ್ಪ ದಿನದ ಹಿಂದ ಗ್ರೀನ್ ಪೀಸ್ ಸಂಸ್ಥೆಯ ನೊಂದಣಿಯನ್ನು ಭಾರತ ಸರ್ಕಾರ ರದ್ದು ಮಾಡಿತ್ತು. ಹಾಗೆಯೇ ಫೋರ್ಡ್ ಫೌಂಡೇಶನ್ ಸಂಸ್ಥೆಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟು, ಆ ಸಂಸ್ಥೆಯಿಂದ ಹರಿದು ಬರುವ ಹಣದ ಬಗ್ಗೆ ಗೃಹಸಚಿವಾಲಕ್ಕೆ ಸೂಚನೆ ನೀಡಲು ಆರ್ ಬಿ ಐ ಗೆ ಸರ್ಕಾರ ಸೂಚನೆ ನೀಡಿತ್ತು.

ಫೋರ್ಡ್ ಫೌಂಡೇಶನ್ ಸಂಸ್ಥೆ, ಗುಜರಾತ್ ಗಲಭೆಗಳ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ಥಾ ಸೆತಲ್ವಾಡ ಅವರಿಗೆ ಧನ ಸಹಾಯ ಮಾಡುತ್ತಿರುವುದರಿಂದ ಗುಜರಾತ್ ಸರ್ಕಾರ ಫೋರ್ಡ್ ಫೌಂಡೇಶನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಸರ್ಕಾರದ ಈ ನಡೆಯನ್ನು ಹಲವಾರು ಸಾಮಾಜಿಕ ಕಾರ್ಯಕರ್ತರು ವಿರೋಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT