ಪ್ರಧಾನ ಸುದ್ದಿ

ರಾಜ್ಯಗಳ ಜೊತೆಗೂಡಿ ಹೊಸ ಶಿಕ್ಷಣ ನೀತಿ: ಸ್ಮೃತಿ ಇರಾನಿ

Guruprasad Narayana

ನವದೆಹಲಿ: ರಾಜ್ಯಗಳ ಜೊತೆ ಚರ್ಚಿಸಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು ಎಂದು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಸೋಮವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ತಮ್ಮ ಸಚಿವಾಲದ ಅನುದಾನಗಳ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇರಾನಿ ಈ ಹಿಂದೆ ಕೆಲವೇ ಜನರ ಸಲಹೆಯೊಂದಿಗೆ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು ಎಂದಿದ್ದಾರೆ.

"ಈಗ ಜಿಲ್ಲೆಗಳಿಗೆ, ರಾಜ್ಯಗಳಿಗೆ, ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಸ್ಪರ ಮಾತುಕತೆಯಿಂದ ಹೊಸ ಶಿಕ್ಷಣ ನೀತಿಯನ್ನು ರೂಪಿಸಬೇಕಿದೆ" ಎಂದಿದ್ದಾರೆ ಇರಾನಿ.

ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿರುವತ್ತ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಇರಾನಿ "ಸಂವಿಧಾನದ ಪರಿಮಿತಿಯೊಳಗೆ ಶಿಕ್ಷಣ ನೀಡಲಾಗುವುದು" ಎಂದಿದ್ದಾರೆ.

ಶಾಲಾ ಶಿಕ್ಷಕರ ತರಬೇತಿಯ ಕಡೆಗೂ ಸರ್ಕಾರ ಲಕ್ಷ್ಯ ನೀಡುತ್ತಿದ್ದು ಪಂಡಿತ್ ಮದನ್ ಮೋಹನ್ ಮಾಳವೀಯ ರಾಷ್ಟ್ರೀಯ ಮಿಶನ್ ಅಡಿ ಶಿಕ್ಷಕರಿಗೆ ಹಾಗೂ ತರಬೇತಿಗೆ ೯೦೦ ಕೋಟಿ ಅನುದಾನ ನೀಡಲಾಗುವುದು ಎಂದಿದ್ದರೆ.

ತಮ್ಮ ಕ್ಷೇತ್ರಗಳಲ್ಲಿನ ಶಾಲೆಗಳಲ್ಲಿನ ಶೌಚಾಲಯಗಳ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸುವಂತೆ ಎಲ್ಲ ಸದಸ್ಯರಿಗೂ ಇರಾನಿ ಮನವಿ ಮಾಡಿದ್ದಾರೆ.

SCROLL FOR NEXT