ಪ್ರಧಾನ ಸುದ್ದಿ

ಕಲ್ಯಾಣಿ ಬ್ಯಾಂಕ್ ಒಂದರಿಂದ ೪೭ಲಕ್ಷ ದೋಚಿದ ದರೋಡೆಕೋರರು

Guruprasad Narayana

ಕಲ್ಯಾಣಿ: ಪಶ್ಚಿಮ ಬಂಗಾಳನ ನಾಡಿಯ ಜಿಲ್ಲೆಯ ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಒಂದರಿಂದ ಸಶಸ್ತ್ರಧಾರಿ ದರೋಡೆಕೋರರು ೪೭ ಲಕ್ಷ ರೂ ದೋಚಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲಹಾಬಾದ್ ಬ್ಯಾಂಕ್ ನ ಇಲ್ಲಿನ ಶಾಖೆ ತೆರೆದ ಕೂಡಲೆ ನುಗ್ಗಿರುವ ಸಶಸ್ತ್ರಧಾರಿ ದರೋಡೆಕೋರರು, ಬಂದೂಕುಗಳನ್ನು ತೋರಿಸಿ ಹಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ಲಾಕರ್ ನಿಂದ ಸುಮಾರು ೪೭ಲಕ್ಷ ಎತ್ತಿಕೊಂಡು ದರೋಡೆಕೋರರು ಓಡಿಹೋಗಿದ್ದಾರೆ. ಇವರುಗಳನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ ಎಂದು ತಿಳಿಯಲಾಗಿದೆ.

SCROLL FOR NEXT