ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಬಿಜೆಪಿ ಕರೆಗೆ ದನಿಯಾದ ಸೂಪರ್ ಸ್ಪೆಷಾಲಿಟಿ ವೈದ್ಯರು, ನೇಪಾಳಕ್ಕೆ ಹೊರಟರು!

ಭೂಕಂಪದಿಂದ ನೇಪಾಳದಲ್ಲಿ ಸಂತ್ರಸ್ತರಾಗಿ ಗಾಯಗಳಾಗಿರುವವರಿಗೆ ಚಿಕಿತ್ಸೆ ನೀಡಲು ಬಿಜೆಪಿ ಡಾಕ್ಟರ್ಸ್ ಸೆಲ್...

ಬೆಂಗಳೂರು: ಭೂಕಂಪದಿಂದ ನೇಪಾಳದಲ್ಲಿ ಸಂತ್ರಸ್ತರಾಗಿ ಗಾಯಗಳಾಗಿರುವವರಿಗೆ ಚಿಕಿತ್ಸೆ ನೀಡಲು ಬಿಜೆಪಿ ಡಾಕ್ಟರ್ಸ್ ಸೆಲ್ ನೇತೃತ್ವದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರ ತಂಡ ನೇಪಾಳದತ್ತ ಹೊರಟಿದೆ.

ಈ ಕುರಿತು ಮಾಹಿತಿ ನೀಡಿದ ಬಿಜೆಪಿ ಡಾಕ್ಟರ್ಸ್ ಸೆಲ್ ಸಂಚಾಲಕ ಡಾ.ಮಂಜುನಾಥ್, ಭೂಕಂಪದಿಂದಾಗಿ ಸುಮಾರು 10 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಅದೇ ರೀತಿಯಾಗಿ 45 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ತಜ್ಞ ವೈದ್ಯರ ತಂಡ ಅಲ್ಲಿಗೆ ತೆರಳುತ್ತಿದೆ ಎಂದರು.

ಕಠ್ಮಂಡುವಿನ ಚಿರಾಯು ಆಸ್ಪತ್ರೆ ಮಂಗಳವಾರ ತಜ್ಞ ವೈದ್ಯರ ಅವಶ್ಯಕತೆಯನ್ನು ಈ ಮೇಲೆ ಮೂಲಕ ಪ್ರಸ್ತಾಪಿಸಿತು. ತಕ್ಷಣವೇ ಬಿಜೆಪಿ ಡಾಕ್ಟರ್ ಸೆರ್ ವಾಟ್ಸಪ್ ಮೂಲಕ ವೈದ್ಯರಿಗೆ ಸಂದೇಶ ರವಾನಿಸಿತು. 1-2 ಗಂಟೆಯಲ್ಲಿ 20ಕ್ಕೂ ಹೆಚ್ಚು ತಜ್ಞ ವೈದ್ಯರು ತಾವು ನೇಪಾಳಕ್ಕೆ ಹೊರಡುವುದಾಗಿ ಸಿದ್ಧರಾದರು.

ಸದ್ಯಕ್ಕೆ ನೇಪಾಳದಲ್ಲಿ ತಜ್ಞ ವೈದ್ಯರ ಅವಶ್ಯಕತೆ ಇದೆ. ಹೀಗಾಗಿ ಮೊದಲ ಹಂತದಲ್ಲಿ 20 ಸೂಪರ್ ಸ್ಪೆಷಾಲಿಟಿ ವೈದ್ಯರ ತಂಡ ಕಠ್ಮಂಡುಗೆ ತೆರಳುತ್ತಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್