ದಿಯೋಗಢ್: ಇಲ್ಲಿನ ಬೆಲಬಗಾನ್‌ನಲ್ಲಿರುವ ದುರ್ಗಾ ದೇವಿ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಜನ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
ಪ್ರಸ್ತುತ ದೇವಾಲಯದಲ್ಲಿ ಶ್ರಾವಣ ಸೋಮವಾರದ ವಿಶೇಷ ಪೂಜೆ ನಡೆಯುತ್ತಿರುವುದರಿಂದ ಲಕ್ಷಗಟ್ಟಲೆ ಜನ ಅಲ್ಲಿಗೆ ಆಗಮಿಸಿದ್ದರು.
ಸೋಮವಾರ ಬೆಳಗ್ಗೆ 5 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಭಕ್ತರು ಸರದಿ ಸಾಲಲ್ಲಿ ನಿಲ್ಲದೆ ನೂಕು ನುಗ್ಗಾಟ ಮಾಡಿದ್ದೇ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಈ ಘಟನೆಯಲ್ಲಿ ಸುಮಾರು 50 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಇದೀಗ ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.