ನವದೆಹಲಿ: ಆಗಸ್ಟ್ ೪ ರಂದು 'ಟೇಕಾಫ್' ನಂತರ ಕಾಣೆಯಾಗಿದ್ದ ಪವನ್ ಹ್ಯಾನ್ಸ್ ಹೆಲಿಕ್ಯಾಪ್ಟರ್ ನ ಅವಶೇಷಗಳು ಅರುಣಾಚಲ ಪ್ರದೇಶದ ತೀರಪ್ ಜಿಲ್ಲೆಯಲ್ಲಿ ಪತ್ತೆಯಾಗಿವೆ.
"ತೀರಪ್ ಜಿಲ್ಲೆಯ ಖೋನ್ಸಾದಿಂದ ೧೨ ಕಿಮೀ ದೂರದಲ್ಲಿ ಕಾಣೆಯಾದ ಹೆಲಿಕ್ಯಾಪ್ಟರ್ ಅವಶೇಷಗಳು ಪತ್ತೆಯಾಗಿವೆ ಎಂದು ಏರ್ ಫೋರ್ಸ್ ಧೃಢೀಕರಿಸಿದೆ" ಎಂದು ಗೃಹ ಸಚಿವಾಲಯದ ರಾಜ್ಯ ಸಚಿವೆ ಕಿರೇನ್ ರಿಜಿಜು ತಿಳಿಸಿದ್ದಾರೆ.
ವಾಯುಪಡೆಯ ಹೆಲಿಕ್ಯಾಪ್ಟರ್ ಅರುಣಾಚಲ ಪ್ರದೇಶದ ಈ ಪ್ರದೇಶದಲ್ಲಿ ಗಸ್ತು ಹೊಡೆಯುವಾಗ ಅವಶೇಷಗಳನ್ನು ಪತ್ತೆ ಹಚ್ಚಿದೆ ಎಂದು ಸಚಿವರು ತಿಳಿಸಿದ್ದಾರೆ.
ಐ ಎ ಎಸ್ ಅದಿಕಾರಿ ಕಮಲೇಶ್ ಜೋಶಿ ಅವರನ್ನೂ ಒಳಗೊಂಡಂತೆ ಹೆಲಿಕ್ಯಾಪ್ಟರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.