ಪ್ರಧಾನ ಸುದ್ದಿ

ಪಾನೀಯದಲ್ಲಿ ಕೀಟ: ಗ್ರಾಹಕನಿಗೆ ೫೫ ಸಾವಿರ ಪಾವತಿಸುವಂತೆ ಪೆಪ್ಸಿ ಸಂಸ್ಥೆಗೆ ಸೂಚನೆ

Guruprasad Narayana

ಚೆನ್ನೈ: ಶಾಲಾ ಕ್ಯಾಂಟಿನ್ ಒಂದರಲ್ಲಿ ಅಶುದ್ಧ ಕೋಲಾ ಪಾನೀಯವುಳ್ಳ ಬಾಟಲ್ ಮಾರುತ್ತಿದ್ದಕ್ಕೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (ದಕ್ಷಿಣ ಚೆನ್ನೈ) ಆ ಕೋಲಾ ಸಂಸ್ಥೆ, ಅದರ ವ್ಯವಸ್ಥಾಪಕ ಮತ್ತು ಅಂಗಡಿ ಮಾಲೀಕರಿಗೆ ೫೫೦೦೦ ರೂ ಪರಿಹಾರ ನೀಡುವಂತೆ ದಂಡ ಹಾಕಿ ಆದೇಶಿಸಿದೆ.

ಖಾಸಗಿ ವಿಮಾ ಸಂಸ್ಥೆಯಲ್ಲಿ ಕೆಲಸ ಮಾಡುವ ಪಟ್ಟಿನಾಂಬಕ್ಕಮ್ ನ ಎ ನೆಹರು ಅವರು, ತಮ್ಮನ್ನು ಭೇಟಿ ಮಾಡಲು ಬಂದಿದ್ದ ಗೆಳೆಯ ವಿನೋದ್ ಅವರೊಂದಿಗೆ ೨೦೦ ಎಂ ಎಲ್ ನ ಎರಡು ಪೆಪ್ಸಿ ಬಾಟಲ್ ಗಳನ್ನು ಕೊಂದಿದ್ದಾರೆ. ಸೇಂಟ್ ಬೀಡೆ ಮೆಟ್ರಿಕ್ಯುಲೇಶನ್ ಹೈಯರ್ ಸೆಕಂಡರಿ ಶಾಲೆಯ ಕ್ಯಾಂಟೀನಿನಿಂದ ಕೊಂಡ ಈ ಪೆಪ್ಸಿ ಕುಡಿದು ಕಚೇರಿಗೆ ತೆರಳಿದ ಮೇಲೆ ವಿನೋದ್ ಅವರಿಗೆ ವಾಂತಿಯಗಿದೆ. ತನಿಖೆ ನಡೆಸಿದ ಮೇಲೆ ಬಾಟೆಲ್ ನಲ್ಲಿ ಕೀಟದ ಅವಶೇಷಗಳು ಪತ್ತೆಯಾಗಿವೆ.

ವಿನೋದ್ ಅವರನ್ನು ನಂತರ ಆಸ್ಪತ್ರೆಗೆ ಸೇರಿಸಲಾಗಿದೆ. ಕ್ಯಾಂಟೀನ್ ಮಾಲಿಕರಿಗೆ ಪಾನೀಯವನ್ನು ಮಾರದಂತೆ ನೆಹರು ವಿನಂತಿಸಿಕೊಂದಿದ್ದಾರೆ. ಆದರೆ ಪೆಪ್ಸಿ ಅಧಿಕಾರಿ ಈ ಘಟನೆಯನ್ನು ಕಡೆಗಣಿಸಿದ್ದರಿಂದ ನೆಹರು ಗ್ರಾಹಕರ ವೇದಿಕೆಯಲ್ಲಿ ದೂರು ನೀಡಿದ್ದಾರೆ.

ವಿಚಾರಣೆ ವೇಳೆಯಲ್ಲಿ, ಆ ಬಾಟೆಲ್ ಮಾತ್ರ ಪೆಪ್ಸಿಯದಾಗಿತ್ತು ಆದರೆ ಪಾನೀಯವನ್ನು ನಕಲು ಮಾಡಿ ತುಂಬಲಾಗಿತ್ತು ಎಂದು ವಾದ ಮಂಡಿಸಿದ್ದರು ಇದಕ್ಕೆ ಪೂರಕವಾದ ಪುರಾವೆಗಳನ್ನು ನೀಡಲು ಸಾಧ್ಯವಾಗಿಲ್ಲ. ಆದುದರಿಂದ ಪೆಪ್ಸಿ ಸಂಸ್ಥೆಯನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.

ನೆಹರು ಅವರು ೧೫.೨೫ ಲಕ್ಷಕ್ಕೆ ಪರಿಹಾರದ ಬೇಡಿಕೆ ಇಟ್ಟಿದ್ದರು, ಗ್ರಾಹಕ ವೇದಿಕೆ ೫೦,೦೦೦ ರೂ ಪರಿಹಾರ ನೀಡುವಂತೆ ಆದೇಶ ನೀಡಿದ್ದು, ವ್ಯಾಜ್ಯಗಳ ಖರ್ಚಿಗೆ ಹೆಚ್ಚುವರಿ ೫೦೦೦ ರೂ ನೀಡುವಂತೆ ಪೆಪ್ಸಿ ಸಂಸ್ಥೆ ಮತ್ತು ಅಂಗಡಿ ಮಾಲಿಕನಿಗೆ ಸೂಚಿಸಿದೆ.

SCROLL FOR NEXT