ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಗೆ ಒತ್ತಾಯಿಸಿ ರೈತರ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದೆ. ಕುಸುಗಲ್ ಹಾಗೂ ಬ್ಯಾಹಟ್ಟಿ ಗ್ರಾಮದ ಸಾವಿರಾರು ರೈತರು ಗುರುವಾರ
ಪಾದಯಾತ್ರೆ ಮೂಲಕ ಹುಬ್ಬಳ್ಳಿಗೆ ಆಗಮಿಸಿ ನಾಲ್ಕು ಗಂಟೆ ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಚಕ್ಕಡಿ ಗಾಡಿ ಸಮೇತ ಪಾದಯಾತ್ರೆಯಲ್ಲಿ ಬಂದ ರೈತರು, ಕೇಶ್ವಾಪುರ ಸರ್ವೋದಯ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ಟೈರ್‍ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಆಗಮಿಸಿ, ಅಲ್ಲೂ ಟೈರ್‍ಗೆ ಬೆಂಕಿ ಹಚ್ಚಿ, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಹುಬ್ಬಳ್ಳಿಧಾರವಾಡಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ರೈತರು ಉಗ್ರ ಹೋರಾಟ ನಡೆಸಿದ್ದರೆ, ಹುಬ್ಬಳ್ಳಿ ಜನತೆ ಹಾಯಾಗಿ ವ್ಯಾಪಾರ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ತಡೆ: ಕಳಸಾಬಂಡೂರಿ ಮೂಲಕ ಮಹದಾಯಿ ನದಿ ತಿರುವು ಯೋಜನೆ ಅನುಷ್ಠಾನಗೊಳಿಸಲು ನವಲಗುಂದದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಗುರುವಾರ ಸಂಶಿ ಹೋಬಳಿಯ ರೈತರು ಸುಮಾರು 6 ತಾಸು ಹುಬ್ಬಳ್ಳಿಲಕ್ಷ್ಮೇಶ್ವರ ಹೆದ್ದಾರಿ ತಡೆ ನಡೆಸಿ ದರು. ಪ್ರತಿಭಟನೆ ವೇಳೆ ಸಂಶಿ ರೈತ ಮಲ್ಲಪ್ಪ ಪಶುಪತಿಹಾಳ ಸೀಮೆಎಣ್ಣೆ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ, ಸ್ಥಳದಲ್ಲಿ ದ್ದ ಪೊಲೀಸರು ಅವರನ್ನು ತಡೆದರು.
22 ದಿನಗಳಿಂದ ನರಗುಂದದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಗುರುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು. ವಿದ್ಯಾರ್ಥಿಗಳು ಹುಬ್ಬಳ್ಳಿಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುರಸಭೆಯಿಂದ ಹೋರಾಟ ಸ್ಥಳದವರೆಗೂ ಉರುಳು ಸೇವೆ ಮಾಡಿದರು ನರಗುಂದನವಲಗುಂದದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಪಕ್ಷಾತೀತ ಹೋರಾಟದಲ್ಲಿ ಗುರುವಾರ ವಕೀಲರು ಭಾಗವಹಿಸಿದ್ದಲ್ಲದೇ, ಕೋರ್ಟ್ ಕಲಾಪ ಬಹಿಷ್ಕರಿಸಿದರು. ಬೆಳಗಾವಿಯಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ಮಠಾಧೀಶರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ಧರಣಿ ನಡೆಸಿದರು.