ಪ್ರಧಾನ ಸುದ್ದಿ

ನಿಮ್ಹಾನ್ಸ್ ಆವರಣದಲ್ಲಿ ವಿಚಾರಣಾಧೀನ ಕೈದಿಯಿಂದ ಗುಂಡಿನ ದಾಳಿ

Vishwanath S
ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆಯ ಆವರಣದಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಪೊಲೀಸ್ ಒಬ್ಬರಿಂದ ಬಂದೂಕು ಕಸಿದು ಮನಬಂದಂತೆ ಗುಂಡು ಹಾರಿಸಿದ್ದ ಪರಿಣಾಮ ಆತಂಕ ವಾತಾವರಣ ನಿರ್ಮಾಣವಾಗಿತ್ತು.
2012ರಿಂದ ಕಾವಲ್ ಭೈರಸಂದ್ರ ನಿವಾಸಿಯಾಗಿರುವ 22 ವರ್ಷದ ವಿಶ್ವನಾಥ್(ಕೈದಿ ನಂಬರ್ 1623)ಗೆ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ಕರೆದುಕೊಂಡು ಬರಲಾಗಿತ್ತು. ನಿಮ್ಹಾನ್ಸ್ ಬಳಿ ಬಂದಾಗ ಭದ್ರತಾ ಸಿಬ್ಬಂದಿ ಬಳಿಯಿದ್ದ 303 ಎಸ್ಎಲ್ಆರ್ ಬಂದೂಕನ್ನು ಕಸಿದುಕೊಂಡು ಗುಂಡು ಹಾರಿಸಿದ್ದ ಎನ್ನಲಾಗಿದೆ.
ಕೈದಿ ವಿಶ್ವನಾಥ್ ಬಂದೂಕು ಕಸಿದುಕೊಂಡು ವಾರ್ಡ್ ವೊಂದರಲ್ಲಿ ಸೇರಿಕೊಂಡಿದ್ದಾನೆ. ಇದರಿಂದಾಗಿ ಪೊಲೀಸರು ವಾರ್ಡ್ ರೂಂನ ಬಾಗಿಲನ್ನು ಹೊರಗಡೆಯಿಂದ ಬೀಗ ಹಾಕಿದ್ದಾರೆ. ಈ ವೇಳೆ ಆತ ಸುಮಾರು 23 ಸುತ್ತು ಗುಂಡು ಹಾರಿಸಿದ್ದಾನೆ. 
ಕೆಲ ತಿಂಗಳುಗಳಿಂದ ತುಂಬಾ ಮೌನಿಯಾಗಿದ್ದ ವಿಶ್ವನಾಥ್. ಸಹ ಕೈದಿಗಳು ತನ್ನನ್ನು ಮಾತನಾಡಿಸಲು ಬಂದಾಗ ಅವರ ಜತೆ ಜಗಳವಾಡುತ್ತಿದ್ದ. ಹೀಗಾಗಿ ಆತನಿಗೆ ಜುಲೈ 24ರಿಂದ ಜೈಲಿನ ವಾರ್ಡಿನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಇಂದು ನಿಮ್ಹಾನ್ಸ್ ಗೆ ಕರೆತರಲಾಗಿತ್ತು. 
ಕಾರ್ಯಾಚರಣೆ ವೇಳೆ ಪೊಲೀಸರ ಗುಂಡೇಟಿಗೆ ಕೈದಿ ಸಾವು
ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕೈದಿ ವಿಶ್ವನಾಥ್ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮನವೊಲಿಕೆಗೆ ಮಣಿಯದ ವಿಶ್ವನಾಥ್ ಅಡಗಿ ಕುಳಿತಿದ್ದ ವಾರ್ಡ್ ರೂಂನ ಬಾಗಿಲು ದೂಡಿ ಒಳ ನುಗಿದ್ದ ಗರುಡು ಪೊಲೀಸರು ಆತನ ಮೇಲೆ ಗುಂಡು ಹಾರಿದ್ದಾರೆ. ಪೊಲೀಸರು ಹಾರಿಸಿದ ಗುಂಡು ವಿಶ್ವನಾಥ್ ಎದೆ, ಕುತ್ತಿಗೆ ಬಿದಿದ್ದರಿಂದ ಮೃತಪಟ್ಟಿದ್ದಾನೆ. 
SCROLL FOR NEXT