ನವದೆಹಲಿ: ಮುಂದಿನ ನಾಲ್ಕು ದಿನಗಳಲ್ಲಿ ಹಿಮಾಲಯದ ತಪ್ಪಲಿನಲ್ಲಿ ಅತಿ ಹೆಚ್ಚು ಮಳೆಯ ಸಂಭವವಿರುವುದರಿಂದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಸಂಭವಿಸಬಹುದಾದ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಹಿಮಾಯದ ತಪ್ಪಲಿನಲ್ಲಿ ಭಾರಿ ಮಳೆಯಿಂದ ಅತಿ ಹೆಚ್ಚು ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
"ಈ ಮಳೆ ಗಂಗಾ ನದಿಯ ಉಪನದಿಗಳು, ಬ್ರಹ್ಮಪುತ್ರ ನದಿಯ ಉಪನದಿಗಳು, ಕೋಸಿ, ಗಂಡಕ್ ಮತ್ತು ಘಘರಾ ನದಿಗಳಲ್ಲಿ ನೀರು ಹೆಚ್ಚು ಉಕ್ಕುವಂತೆ ಮಾಡುತ್ತದೆ.
"ಇದರಿಂದ ಪೂರ್ವ ಉತ್ತರ ಪ್ರದೇಶ, ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಹಿಮಾಲಯ ಶ್ರೇಣಿಗಳಲ್ಲಿ ಪ್ರವಾಹ ಉಂಟುಮಾಡುವ ಸಾಧ್ಯತೆ ಇದೆ" ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಉನ್ನತ ಸಭೆಯಲ್ಲಿ ರಾಥೋರ್ ಹೇಳಿದ್ದಾರೆ.
ಈ ಭೇಟಿಯಲ್ಲಿ ಕೇಂದ್ರ ನೀರು ಆಯೋಗದ ಸದಸ್ಯರು ಹಾಗೂ ಆಯಾ ರಾಜ್ಯಗಳ ಕಮಿಷನರ್ ಗಳು ಭಾಗಿಯಾಗಿದ್ದರು.