ಮೊಹಮ್ಮದ್ ನಾವೇದ್ 
ಪ್ರಧಾನ ಸುದ್ದಿ

ಉಗ್ರ ತರಬೇತಿ ತೊರೆಯಲು ಯತ್ನಿಸಿದ್ದ ನಾವೇದ್ ಕುಟುಂಬಕ್ಕೆ ಇಲ್‌ಇಟಿ, ಐಎಸ್‌ಐನಿಂದ ಬೆದರಿಕೆ

ಜಮ್ಮು ಮತ್ತು ಕಾಶ್ಮೀರದ ಉಧಾಂಪುರದ ಉಗ್ರ ದಾಳಿಯ ವೇಳೆ ಸೆರೆ ಸಿಕ್ಕ ಮೊಹಮ್ಮದ್ ನಾವೇದ್, ಉಗ್ರ ಸಂಘಟನೆಯ ತರಬೇತಿ ಶಿಬಿರವನ್ನು ತೊರೆಯಲು...

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉಧಾಂಪುರದ ಉಗ್ರ ದಾಳಿಯ ವೇಳೆ ಸೆರೆ ಸಿಕ್ಕ ಮೊಹಮ್ಮದ್ ನಾವೇದ್, ಉಗ್ರ ಸಂಘಟನೆಯ ತರಬೇತಿ ಶಿಬಿರವನ್ನು ತೊರೆಯಲು ಯತ್ನಿಸಿದ್ದಕ್ಕೆ ಲಷ್ಕರ್-ಇ-ತೋಯಿಬಾ ಹಾಗೂ ಐಎಸ್‌ಐ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿತ್ತು ಎಂದು ಎನ್‌ಐಎ ಅಧಿಕಾರಿಗಳಿಗೆ ನಾವೇದ್ ತಿಳಿಸಿದ್ದಾನೆ.

ಎನ್‌ಐಎ ಅಧಿಕಾರಿಗಳ ಪ್ರಕಾರ, ಉಗ್ರ ಸಂಘಟನೆಯ ನಾಯಕರು ನಾವೇದ್‌ಗೆ ಒಂದು ನಿರ್ಧಿಷ್ಟ ಟಾರ್ಗೆಟ್ ಮತ್ತು ಭಾರಿ ಮೊತ್ತದ ಹಣದ ಭರವಸೆ ನೀಡಿ, ಫೈಸಲಾಬಾದ್‌ಗೆ ಕಳುಹಿಸಿದ್ದರು ಎಂದು ಹೇಳಿಕೊಂಡಿದ್ದಾನೆ.

'ಜಮ್ಮು ಮತ್ತು ಕಾಶ್ನೀರ ದಾಳಿಯ ಹೊರತಾಗಿಯೂ ನಾವೇದ್ ಇತರೆ ಐದು ಅಥವಾ ಆರು ನಿರ್ಧಿಷ್ಟ ದಾಳಿಯ ಟಾರ್ಗೆಟ್ ನೀಡಲಾಗಿತ್ತು. ಇದಕ್ಕಾಗಿ ಆತನಿಗೆ ಭಾರಿ ಮೊತ್ತದ ಹಣ ನೀಡುವ ಭರವಸೆ ನೀಡಿದ್ದರು' ಎಂದು ಉಗ್ರ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ.

ತರಬೇತಿ ನೀಡುತ್ತಿದ್ದ ಉಗ್ರ ಸಂಘಟನೆಯ ನಾಯಕರು ನಿರಂತರವಾಗಿ ನಾವೇದ್‌ಗೆ ಡ್ರಗ್ಸ್ ನೀಡುತ್ತಿದ್ದರಿಂದ, ಆತ ಡ್ರಗ್ಸ್‌ಗೆ ದಾಸನಾಗಿದ್ದ ಎಂದು ಎನ್‌ಐಎ ಅಧಿಕಾರಿಗಳು ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಎಲ್‌ಇಟಿ ತರಬೇತಿ ಬಿಟ್ಟು ಬಾ ಅಂತ ನಾವೇದ್ ಪೋಷಕರು ಆತನ ಮೇಲೆ ಒತ್ತಡ ಹೇರಿದ್ದರು. ಈ ವಿಷಯ ತಿಳಿದ ಉಗ್ರ ಸಂಘಟನೆಯ ನಾಯಕರು, 'ಈಗ ಆತನನ್ನು ಮರೆತು ಬಿಡಿ, ನಾವೇದ್‌ಗೆ ನಮ್ಮ ಕೆಲಸದ ಜವಾಬ್ದಾರಿ ನೀಡಲಾಗಿದೆ' ಎಂದು ಎಚ್ಚರಿಸಿದ್ದರು.

ಎಲ್‌ಇಟಿಯಿಂದ ನನ್ನ ಕುಟುಂಬ ಯಾವುದೇ ಹಣ ಪಡೆದಿಲ್ಲ ಎಂದು ಹೇಳಿರುವ ನಾವೇದ್, ಉಗ್ರ ಸಂಘಟನೆಯ ತರಬೇತಿ ಶಿಬಿರಗಳಿಗೆ ಐಎಸ್‌ಐ ಅಧಿಕಾರಿಗಳು ಗುಪ್ತವಾಗಿ ಭೇಟಿ ನೀಡುತ್ತಾರೆ ಎಂದು ಎನ್‌ಐಎ ಅಧಿಕಾರಿಗಳಿಗೆ ತಿಳಿಸಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT