ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಶಿಲಾಯುಗದಲ್ಲಿ ನಡೆದ ಮಾರಣಹೋಮದ ಅವಶೇಷಗಳು ಜರ್ಮನಿಯಲ್ಲಿ ಪತ್ತೆ

ಶಿಲಾಯುಗದಲ್ಲಿ ನಡೆದಿರಬಹುದಾದ ಗುಂಪು ಕೊಲೆಗಳ ಸಾಕ್ಷ್ಯಗಳು ಜರ್ಮನಿಯ ಫ್ರಾಂಕ್ಫರ್ಟ್ ನಗರದ ಹೊರವಲಯದಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮವೊಂದು

ಬರ್ಲಿನ್: ಶಿಲಾಯುಗದಲ್ಲಿ ನಡೆದಿರಬಹುದಾದ ಗುಂಪು ಕೊಲೆಗಳ ಸಾಕ್ಷ್ಯಗಳು ಜರ್ಮನಿಯ ಫ್ರಾಂಕ್ಫರ್ಟ್ ನಗರದ ಹೊರವಲಯದಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

೭೦೦೦ ವರ್ಷಗಳ ಹಿಂದಿನ ನಿಯೋಲಿಥಿಕ್ ಸಮಯದ ಈ ಪಳೆಯುಳಿಕೆಗಳನ್ನು ಮೊದಲ ಬಾರಿ ೨೦೦೬ರಲ್ಲಿ ಫ್ರಾಂಕ್ಫರ್ಟ್ ನಗರದಿಂದ ೧೫ ಕಿಮೀ ಹೊರವಲಯದಲ್ಲಿ ಅಗೆದು ಪತ್ತೆಹಚ್ಚಲಾಗಿತ್ತು. ಆದರೆ ಸಂಶೋಧಕರು ನಂತರ ಆ ಪಳೆಯುಳಿಕೆಗಳ ಮೂಳೆಗಳನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡಿದ್ದರು.

"ಕನಿಷ್ಠ ೨೬ ಜನರಿಗೆ ಚಿತ್ರಹಿಂಸೆ ನೀಡಿ ಕೊಂದು ಗುಂಡಿಗೆ ಹಾಕಲಾಗಿದೆ" ಎಂದು ಮುಖ್ಯ ಸಂಶೋಧಕ ಕ್ರಿಶ್ಚಿಯನ್ ಮೇಯರ್ ಸೋಮವಾರ ತಿಳಿಸಿದ್ದಾರೆ.

ದಾಳಿ ಮಾಡಿರುವವರು ಬಹುಶಃ ಸಂತ್ರಸ್ತರನ್ನು ಪ್ರಾಣಿಗಳ ಮೂಳೆಯಿಂದ ತಯಾರಿಸಿರುವ ಬಾಣಗಳು ಮತ್ತು ಕಲ್ಲಿನ ಕೊಡಲಿಗಲಲ್ಲಿ ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.

೨೬ ಜನರಲ್ಲಿ ೧೨ ರಿಂದ ೧೩ ಜನ ಮಕ್ಕಳು, ಇಬ್ಬರು ಮಹಿಳೆಯರು ಮತ್ತುಳಿದವರು ಪುರುಷರು ಎಂದು ಅಂದಾಜಿಸಲಾಗಿದೆ. ಇಬ್ಬರೂ ಮಹಿಳೆಯರು ಸುಮಾರು ೪೦ ವರ್ಷದವರು ಎಂದು ತಿಳಿಯಲಾಗಿದೆ.

"ಈ ದಾಳಿಯ ವೇಳೆಯಲ್ಲಿ ಯುವ ಮಹಿಳೆಯರನ್ನು ಅಪಹರಿಸಲಾಗಿದೆ ಎಂಬುದನ್ನು ಇದು ತಿಳಿಸುತ್ತದೆ" ಎಂದು ಮೇಯರ್ ತಿಳಿಸಿದ್ದಾರೆ.

ಯಾವುದೇ ಸಂಪ್ರದಾಯ ಅಥವಾ ಗೌರವಯುತ ಸಂಸ್ಕಾರಗಳನ್ನು ಸೂಚಿಸಲು ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.

ದಾಳಿಕೋರರ ಉದ್ದೇಶದ ಬಗ್ಗೆ ಊಹಿಸಿವುದು ಕಷ್ಟ ಎಂದಿರುವ ಮೇಯರ್ ಮತ್ತು ಸಹೋದ್ಯೋಗಿಗಳು, ಬಹುಶಃ ಇಡಿ ಗ್ರಾಮದವರನ್ನು ಕೊಂದು ಹಾಕಿರಬಹುದು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT