ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚುನಾವಣೆ ನಂತರ ಬೆಂಗಳೂರಿಗೊಬ್ಬ ಮಂತ್ರಿ: ಸಿಎಂ ಸಿದ್ದರಾಮಯ್ಯ

ಚುನಾವಣೆ ನಂತರ ಬೆಂಗಳೂರಿಗೇ ಒಬ್ಬ ಪ್ರತ್ಯೇಕ ಸಚಿವರನ್ನು ನೇಮಕ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಸಿದ್ದರಾಮಯ್ಯ
Lingaraj Badiger
Updated On : 19 Aug 2015, 12:08 pm

ಬೆಂಗಳೂರು: ಚುನಾವಣೆ ನಂತರ ಬೆಂಗಳೂರಿಗೇ ಒಬ್ಬ ಪ್ರತ್ಯೇಕ ಸಚಿವರನ್ನು ನೇಮಕ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾ ಸಂಪಾದಕರ ಜತೆಗಿನ ಸಂವಾದದಲ್ಲಿ ಮಾತನಾಡಿದ ಸಿಎಂ, 11 ವರ್ಷಗಳ ಬಳಿಕ ನಗರಕ್ಕೆ ಮತ್ತೆ ಒಬ್ಬ ಪ್ರತ್ಯೇಕ ಸಚಿವರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ವೇಳೆ ಉದ್ಯಾನ ನಗರಿಯ ಅಭಿವೃದ್ಧಿ ಕನಸು ಸಾಕಾರಗೊಳಿಸಲು ಬೆಂಗಳೂರು ನಗರ ಎಂಬ ಸ್ವತಂತ್ರ ಖಾತೆಯನ್ನು ಹುಟ್ಟುಹಾಕಿ ಒಬ್ಬ ಸಚಿವರನ್ನು ನೇಮಕ ಮಾಡಲಾಗುವುದು. ಫ‌ಲಿತಾಂಶ ಯಾವ ಸ್ವರೂಪದಲ್ಲಿದ್ದರೂ ಬಿಬಿಎಂಪಿ ಚುನಾವಣೆ ನಂತರ ನಗರಕ್ಕಾಗಿಯೇ ಹೊಸ ಸಚಿವ ಖಾತೆ ಹುಟ್ಟುಹಾಕುವುದು ಖಚಿತ ಎಂದು ಅವರು ತಿಳಿಸಿದರು.

ಬೆಂಗಳೂರು ನಗರದ ಅಭಿವೃದ್ಧಿ ತಮ್ಮದೇ ಆದ ಮುನ್ನೋಟ ನೀಡಿರುವ ನೀವು (ಸಿಎಂ) ಅದು ಕಾರ್ಯರೂಪಕ್ಕೆ ಬರುವಂತೆ ಮಾಡಲು ಕಾರ್ಯಪಡೆ ರಚಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಗೆದ್ದು ಉತ್ತಮ ಪಾಲಿಕೆ ರೂಪುಗೊಂಡರೆ ಸರ್ಕಾರದ ಚಿಂತನೆಗಳನ್ನು ಪಾಲಿಕೆಯ ಮೂಲಕ ಜಾರಿಗೊಳಿಸಬಹುದು. ಇದಕ್ಕೆ ಪ್ರತ್ಯೇಕ ತಂಡದ ಅಗತ್ಯವಿಲ್ಲ. ಇದರ ಬದಲಾಗಿ ಒಂದು ಸ್ವತಂತ್ರ ಖಾತೆಯನ್ನು ನಗರಕ್ಕಾಗಿ ನೀಡುವ ಆಲೋಚನೆಯಿದೆ ಎಂದು ಸಿಎಂ ಹೇಳಿದರು.

ಬೆಂಗಳೂರಿಗೆ ಪ್ರತ್ಯೇಕ ಸಚಿವರ ನಿಯುಕ್ತಿ ಇದೇ ಮೊದಲೇನಲ್ಲ. ಈ ಹಿಂದೆ ಜೆ.ಎಚ್‌.ಪಟೇಲ್‌ ಅವರ ಕಾಲಾವಧಿಯಲ್ಲಿ ಅನಂತನಾಗ್‌, ಅನಂತರ ಸೋಮಣ್ಣ ಹಾಗೂ ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರ ಖಾತೆ ಸಚಿವರಾಗಿದ್ದರು. ಅದೇ ಮಾದರಿಯಲ್ಲಿ ಹೊಸ ಖಾತೆ ಸೃಷ್ಟಿಸಲಾಗುವುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement