ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ 
ಪ್ರಧಾನ ಸುದ್ದಿ

ಲೋಕಾ ಪದಚ್ಯುತಿಗೆ ಚಾಲನೆ

ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸುವ ಗೊತ್ತುವಳಿ ಮಂಡಿಸುವ ಪ್ರಕ್ರಿಯೆಗೆ ಬಿಜೆಪಿ ಚಾಲನೆ ...

ಬೆಂಗಳೂರು: ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸುವ ಗೊತ್ತುವಳಿ ಮಂಡಿಸುವ ಪ್ರಕ್ರಿಯೆಗೆ ಬಿಜೆಪಿ ಚಾಲನೆ ನೀಡಿದ್ದು, ಪಕ್ಷಾತೀತವಾಗಿ ಶಾಸ-ಕರ ಸಹಿ ಸಂಗ್ರಹಣೆ ಆರಂಭಿಸಿದೆ.
ಮುಂದಿನ ವಾರದ ಆರಂಭದಲ್ಲಿ ವಿಧಾನಸಭಾಧ್ಯಕ್ಷರು ಹಾಗೂ ಪರಿಷತ್ ಸಭಾಪತಿ ಅವರಿಗೆ ಈ ಗೊತ್ತುವಳಿ ಸೂಚನೆ ಸಲ್ಲಿಸಲಿದ್ದಾರೆ.ನ್ಯಾ.ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸುವ ಗೊತ್ತುವಳಿ ಸೂಚನೆಗೆ ಶಾಸಕರಿಂದ ಸಹಿ ಸಂಗ್ರಹಿಸುವ ಪ್ರಕ್ರಿಯೆಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದರು. ಬಿಜೆಪಿ ಅಷ್ಟೇ ಅಲ್ಲದೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರೂ ಈ ಸೂಚನೆಗೆ ಸಹಿ ಹಾಕುವಂತೆ ಮನವಿ ಮಾಡಲಾಗುತ್ತದೆ. ಪಕ್ಷಾತೀತವಾಗಿ ಎಲ್ಲರೂ ಗೊತ್ತುವಳಿ ಸೂಚನೆಗೆ ಸಹಿ ಹಾಕಿಅದನ್ನು ಸಭಾಧ್ಯಕ್ಷ, ಸಭಾಪತಿಯವರಿಗೆ ಆ.24 ಅಥವಾ 26ರಂದು ಸಲ್ಲಿಸಲು ನಿರ್ಧರಿಸಲಾಗಿದೆ.ಬಿಜೆಪಿಯ ಗೋವಿಂದ ಕಾರಜೋಳ, ಸಿ.ಟಿ. ರವಿ,ಲಕ್ಷ್ಮಣ ಸವದಿ, ಸಂಜಯ್ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಲೆಹರ್ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲೇ ಮಂಗಳವಾರ ಗೊತ್ತುವಳಿ ಸೂಚನೆಗೆ ಸಹಿ ಹಾಕಿದರು.


ಬಿಜೆಪಿ ಸದಸ್ಯರ ಸಹಿ ಸಂಗ್ರಹಿಸುವ ಜವಾಬ್ದಾರಿಯನ್ನು ಸಿ.ಟಿ.-ರವಿ ಹಾಗೂ ಲಕ್ಷ್ಮಣ ಸವದಿ ಅವರಿಗೆ ವಹಿಸಲಾಗಿದೆ. ಅಲ್ಲದೆ, ಜೆಡಿಎಸ್ ಸದಸ್ಯರು ಸಹಿ ಹಾಕುವಂತೆಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಳ್ಳಲಾಗುತ್ತದೆ. ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಅವರು ಈ ಬಗ್ಗೆ ನಾಯಕರೊಂದಿಗೆಮಾತುಕತೆ ನಡೆಸಲಿದ್ದಾರೆ. ಕಾಂಗ್ರೆಸ್ ಶಾಸಕರೂ ಸಹಿಹಾಕುವಂತೆ ಮನವಿ ಮಾಡಲಾಗುತ್ತದೆ ಎಂದು ಪ್ರಹ್ಲಾದ ಜೋಶಿ ವಿವರಿಸಿದ್ದಾರೆ. ನ್ಯಾ. ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್‍ರಾವ್ ಪ್ರಕರಣಗಳಇತ್ಯರ್ಥದಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಜತೆಗೆ ಅವರನ್ನು ವಿಶೇಷ ತನಿಖಾ ದಳ ಕೂಡ ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಕಳೆದಮೂರು ತಿಂಗಳಿಂದ ಲೋಕಾಯುಕ್ತ ಹುದ್ದೆಗೆ ನ್ಯಾ. ಭಾಸ್ಕರ್ ರಾವ್ ಅವರು ರಾಜಿನಾಮೆ ನೀಡಬೇಕು ಎಂಬ ಒತ್ತಡ ಬಂದಿದ್ದರೂ ಅದಕ್ಕೆ ಮಣಿದಿಲ್ಲ ಬದಲಿಗೆ ರಜೆಯಲ್ಲಿತೆರಳಿದ್ದಾರೆ. ಈ ಮಧ್ಯೆ ಇದುವರೆಗೆ ಪ್ರಕರಣದಲ್ಲಿ 8 ಮಂದಿ ಯನ್ನು ಬಂಧಿಸಲಾಗಿದೆ. ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವಅಧಿಕಾರ ವಿಧಾನ ಮಂಡಲಕ್ಕೂ ಇರಲಿಲ್ಲ. ಹೀಗಾಗಿ, ಲೋಕಾಯುಕ್ತ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿತು. ಜು.30 ಮತ್ತು  31ರಂದು ಲೋಕಾಯುಕ್ತ ಕಾಯ್ದೆ ತಿದ್ದುಪಡಿಗಾಗಿ ವಿಶೇಷ ಅಧಿವೇಶನ ನಡೆಸಿತು. ಈ ತಿದ್ದುಪಡಿಗೆ ಆ.17 ಸೋಮವಾರ ರಾಜ್ಯಪಾಲರು ಸಹಿ ಹಾಕಿದ್ದರು. ಅಂದು ಸಂಜೆಯೇ ಈ ಕಾಯ್ದೆ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ,ವಿಧಾನಮಂಡಲ ಸದಸ್ಯರಿಗೆ ಲಭ್ಯವಾಗಿರುವ ಅಧಿಕಾರವನ್ನು ಚಲಾಯಿಸಿ ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ
ಪ್ರಕ್ರಿಯೆಗೆ ಬಿಜೆಪಿ ಚಾಲನೆ ನೀಡಿದೆ.

ಪದಚ್ಯುತಿ ಪ್ರಕ್ರಿಯೆ ಹೇಗೆ?

- ಲೋಕಾಯುಕ್ತರ ದುರ್ವರ್ತನೆ ಅಥವಾ ಅಸಾಮಥ್ರ್ಯದ ಕಾರಣ ನೀಡಿ ಪದಚ್ಯುತಿ ಗೊತ್ತುವಳಿ
ಸೂಚನೆ ಮಂಡಿಸಬಹುದು.
-ಈ ಗೊತ್ತುವಳಿ ಸೂಚನೆಗೆ ಉಭಯ ಸದನದಲ್ಲಿ ಮೂರನೇ ಒಂದು ಭಾಗದ ಸದಸ್ಯರು ಸಹಿ ಹಾಕಬೇಕು.
- ವಿಧಾನಸಭೆಯಲ್ಲಿ 75 ಹಾಗೂ ವಿಧಾನಪರಿಷತ್‍ನಲ್ಲಿ 25 ಸದಸ್ಯರ ಸಹಿ ಅತ್ಯಗತ್ಯ.
- ಸಭಾಧ್ಯಕ್ಷ ಹಾಗೂ ಸಭಾಪತಿಯವರು ಸಮಾಲೋಚನೆನಡೆಸಿ ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪಿದೆ ಎಂದು ಕಂಡುಬಂದರೆ ಗೊತ್ತುವಳಿ ಸೂಚನೆಯನ್ನು
ಅಂಗೀಕರಿಸಬಹುದು; ಇಲ್ಲವೇ ನಿರಾಕರಿಸಬಹುದು.

- ಗೊತ್ತುವಳಿಯನ್ನು ಅಂಗೀಕರಿಸಿದರೆ, ಈ ಸಂಬಂಧ
ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್
ಮುಖ್ಯ ನ್ಯಾಯಮೂರ್ತಿಗೆ ನಿರ್ದೇಶಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!