ಸುಂದರ ಪಿಚ್ಚೈ 
ಪ್ರಧಾನ ಸುದ್ದಿ

ಗೂಗಲ್‍ ಸಿಇಒ ಸುಂದರ ಪಿಚ್ಚೈಗೂ ರ್ಯಾಗಿಂಗು!

ಕಾಲೇಜಿನ ಮೊದಲ ವರ್ಷದಲ್ಲಿ ನೀವು ರ್ಯಾಗಿಂಗ್ ಮಾಡಿಸಿಕೊಂಡಿದ್ದರೆ, ಬೇಸರಪಟ್ಟುಕೊಳ್ಳಬೇಡಿ. ಗೂಗಲ್‍ನ ಹೊಸ ಸಿಇಒ...

ಕಾಲೇಜಿನ ಮೊದಲ ವರ್ಷದಲ್ಲಿ ನೀವು ರ್ಯಾಗಿಂಗ್ ಮಾಡಿಸಿಕೊಂಡಿದ್ದರೆ, ಬೇಸರಪಟ್ಟುಕೊಳ್ಳಬೇಡಿ. ಗೂಗಲ್‍ನ ಹೊಸ ಸಿಇಒ ಸುಂದರ ಪಿಚ್ಚೈ ಕೂಡ ಹೀಗೆ ರ್ಯಾಗಿಂಗ್ ಮಾಡಿಸಿಕೊಂಡವರೇ. 1985ರಲ್ಲಿ ಅವರು ಖರಗ್‍ಪುರ ಐಐಟಿಯಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು.

ಅರವಿಂದಕೇಜ್ರಿವಾಲ್ ಮತ್ತು ಹರೀಶ್ ಹಂದೆ ಕೂಡ ಅದೇ ಸುಮಾರಿಗೆ ಅಲ್ಲೇ ಓದಿದವರು. ಇರಲಿ. ಅದು ಸೀನಿಯರ್‍ಗಳು ಜೂನಿಯರ್ ಗಳನ್ನು ರ್ಯಾಗ್ ಮಾಡುತ್ತಿದ್ದ ಕಾಲ. ಸುಂದರ್ ಪಿಚ್ಚೈ ಎಷ್ಟು ಸಾಮಾನ್ಯ ಮತ್ತು ಯಾರ ಗಮನವನ್ನೂ ಸೆಳೆಯದ ವಿದ್ಯಾರ್ಥಿಯಾಗಿದ್ದರು ಅಂದರೆ, ಸೀನಿಯರ್ ಗಳು ಅವರನ್ನು ಜಾಸ್ತಿ ಕಾಡಿಸಲು ಹೋಗಲಿಲ್ಲವಂತೆ.

ಆದರೊಮ್ಮೆ ಸೀನಿಯರ್ಗಳು ಹೇಳಿದಾಗ ಸುಂದರ್ ಹೆಚ್ಚು ತಂಟೆ ಮಾಡಿಕೊಳ್ಳದೆ, ಟೇಬಲ್ ಮೇಲೆ ಜಿಗಿದು ನಿಂತು ಡ್ಯಾನ್ಸ್ ಮಾಡಿದರು. ಬಾಲ್ಕನಿಯ ಮೇಲೆ ನಿಂತು ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಗೇಲಿ ಮಾಡಿದರು. ತದನಂತರ ಸೀನಿಯರ್‍ಗಳೂ ಅವರೂ ಫ್ರೆಂಡ್ಸ್ ಆಗಿಬಿಟ್ಟರು ಹೀಗಂತ ಹೇಳಿದ್ದು ಸುಂದರರ ಕ್ಲಾಸ್ಮೇಟ್.

ಸಹಪಾಠಿಗಳು ಪಿಚ್ಚೈಯನ್ನು ಪ್ರೀತಿಯಿಂದ `ಸುಂದಿ' ಎಂದೇ ಕರೆಯುತ್ತಿದ್ದರಂತೆ. ಅಂಥ ಆರ್ಡಿನರಿ ಸ್ಟೂಡೆಂಟ್ ಗೂಗಲ್ ಸಿಇಒ ಆಗುವುದನ್ನು ಅಂದು ಊಹಿಸಲು ಕೂಡ ಸಾಧ್ಯವಿರಲಿಲ್ಲ ಅನ್ನುತ್ತಾರೆ ಅವರ ಸಹಪಾಠಿ ಸೌವಿಕ್ ಗಂಗೋಪಾಧ್ಯಾಯ ಎಂಬವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತದ ರಕ್ಷಣಾ ರಫ್ತು ಇತಿಹಾಸದಲ್ಲೇ ದಾಖಲೆಯ ಏರಿಕೆ!, ಖರೀದಿದಾರರು ಯಾರು?

ಭಾರತದತ್ತ ಹೊರಟಿದ್ದ ಇರಾನ್ ತೈಲ ಹೊತ್ತ ಹಡಗು ಏಕಾಏಕಿ ಚೀನಾಗೆ ರೀ-ರೂಟ್; ಕೇಂದ್ರ ಹೇಳಿದ್ದೇನು?

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

SCROLL FOR NEXT